BengaluruCinema

ಯುವರಾಜ್‌ಕುಮಾರ್‌ ಚಿತ್ರರಂಗಕ್ಕೆ ಅಧಿಕೃತ ಎಂಟ್ರಿ; ಯುವ ಟೈಟಲ್‌ ಸೆಲೆಕ್ಟ್‌ ಆಗಿದ್ದು ಹೇಗೆ..?

ಬೆಂಗಳೂರು; ಡಾ.ರಾಜ್ ಕುಟುಂಬದ ಮತ್ತೊಂದು ಕುಡಿ ಅಧಿಕೃತವಾಗಿ ಚಿತ್ರರಂಗ ಎಂಟ್ರಿಯಾಗಿದೆ. ರಾಘವೇಂದ್ರ ರಾಜ್‌ಕುಮಾರ್‌ ಮತ್ತೊಬ್ಬ ಪುತ್ರ ಯುವ ರಾಜ್‌ಕುಮಾರ್‌ ಅವರ ಹೊಸ ಚಿತ್ರದ ಟೈಟಲ್‌ ಟೀಸರ್‌ ನಿನ್ನೆ ರಿಲೀಸ್‌ ಆಗಿದೆ. ಜೊತೆಗೆ ಚಿತ್ರದ ಮುಹೂರ್ತ ಕೂಡಾ ನಿನ್ನೆಯೇ ನಡೆದಿದೆ. ಯುವ ರಾಜ್‌ಕುಮಾರ್‌ ಅವರ ಪುನೀತ್‌ ರಾಜ್‌ಕುಮಾರ್‌ ಅವರ ಸ್ಥಾನ ತುಂಬುತ್ತಾರೆ ಎಂದೇ ಹೇಳಲಾಗುತ್ತಿದೆ. ಅವರ ಚೊಚ್ಚಲ ಸಿನಿಮಾಗೆ ಯುವ ಎಂಬ ಟೈಟಲ್‌ ಫಿಕ್ಸ್‌ ಮಾಡಲಾಗಿದೆ. ಅಂದಹಾಗೆ ಯುವರಾಜ್‌ಕುಮಾರ್‌ರ ಮೊದಲ ಚಿತ್ರಕ್ಕೆ ಮೂರು ಟೈಟಲ್‌ಗಳನ್ನು ಸೂಚಿಸಲಾಗಿತ್ತು. ಅದರಲ್ಲಿ ಯುವ ಟೈಟಲ್‌ ಫೈನಲ್‌ ಮಾಡಲಾಗಿದೆ.

ಹೊಂಬಾಳೆ ಫಿಲ್ಮ್ಸ್‌ ಈ ಚಿತ್ರ ನಿರ್ಮಾಣ ಮಾಡುತ್ತಿದೆ. ಮೊದಲು ಫೀಲ್ಮ್‌ ಚೇಂಬರ್‌ನಲ್ಲಿ ಮೂರು ಹೆಸರುಗಳನ್ನು ನೋಂದಾಯಿಸಲಾಗಿತ್ತು. ಡಾ.ರಾಜ್ ನಟನೆಯ ಜ್ವಾಲಾಮುಖಿ ಮತ್ತು ಅಶ್ವಮೇಧ ಹೆಸರುಗಳನ್ನೂ ಸೂಚಿಸಲಾಗಿತ್ತು. ಆದ್ರೆ ಕೊನೆಗೆ ‘ಯುವ’ ಟೈಟಲ್ ಅನ್ನು ಅಂತಿಮ ಮಾಡಲಾಗಿದೆ. ಈಗಾಗಲೇ ಯುವರಾಜ್ ಕುಮಾರ್ ‘ಯುವ’ ಹೆಸರಿನಲ್ಲೇ ಕರೆಯಲ್ಪಡುತ್ತಿದ್ದಾರೆ. ಹೀಗಾಗಿ ಅದೇ ಹೆಸರು ಸೂಕ್ತ ಎಂಬ ತೀರ್ಮಾನಕ್ಕೆ ಬರಲಾಗಿದೆ. ಪುನೀತ್‌ ರಾಜ್‌ಕುಮಾರ್‌ ಅವರ ಮೊದಲ ಚಿತ್ರ ಅಪ್ಪು ಟೈಟಲ್‌ ಕೂಡಾ ಹೀಗೆಯೇ ಫೈನಲ್‌ ಮಾಡಲಾಗಿತ್ತು.

Share Post