Cinema

ಬಿಟೌನ್‌ ನಲ್ಲಿ ರಶ್ಮಿಕಾ ಹವಾ, ಕರಣ್‌ ಜೋಹರ್‌ ಜೊತೆ ಸಿನಿಮಾ ?

ಮುಂಬೈ : ನ್ಯಾಷನಲ್‌ ಕ್ರಶ್‌ ಎನಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‌ ಬ್ಯೂಟಿ ಆಗುತ್ತಿದ್ದಾರೆ. ಬಾಲಿವುಡ್‌ನಲ್ಲಿ ಸಾಕಷ್ಟು ಪ್ರಾಜೆಕ್ಟ್‌ಗಳ ಮಾತುಕತೆಯಲ್ಲಿ ತೊಡಗಿರುವ ರಶ್ಮಿಕಾ ಈಗ ಮತ್ತೊಂದು ಸುದ್ದಿಯಿಂದ ಹಾಟ್‌ ನ್ಯೂಸ್‌ ಆಗಿದ್ದಾರೆ.

ಪುಷ್ಪ ಸಿನಿಮಾ ಸಕ್ಸಸ್‌ ನಂತರ ರಶ್ಮಿಕಾ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಪುಷ್ಪ ೨ ಸಿನಿಮಾಗಾಗಿ 2 ಕೋಟಿ ಸಂಭಾವನೆ ಕೇಳಿದ್ದಾರೆ ಎಂಬ ಮಾತುಗಳು ಕೂಡ ಹರಿದಾಡುತ್ತಿವೆ. ಈಗ ರಶ್ಮಿಕಾ ಅವರು ಬಾಲಿವುಡ್‌ನ ಬಿಗ್‌ ಪ್ರೊಡ್ಯೂಸರ್‌ ಒಬ್ಬರನ್ನು ಭೇಟಿ ಆಗಿದ್ದಾರೆ ಅದೇ ವಿಷಯಕ್ಕೆ ರಶ್ಮಿಕಾ ಈಗ ಸುದ್ದಿ ಆಗಿದ್ದಾರೆ.

ಕರಣ್‌ ಜೋಹರ್‌ ಅವರನ್ನು ರಶ್ಮಿಕಾ ಅವರು ನಿನ್ನೆ ಭೇಟಿ ಮಾಡಿದ್ದಾರೆ. ಇತ್ತೀಚೆಗೆ ಪುಷ್ಪ ಸಿನಿಮಾ ನೋಡಿದ್ದ ಕರಣ್‌ ಜೋಹರ್‌ ಸಿನಿಮಾವನ್ನು ಹೊಗಳಿದ್ದರು. ಈಗ ರಶ್ಮಿಕಾ ಅವರನ್ನು ಭೇಟಿ ಮಾಡಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.

ಮೊದಲು ಸ್ಯಾಂಡಲ್ವುಡ್‌, ನಂತರ ಟಾಲಿವುಡ್‌, ಈಗ ಬಾಲಿವುಡ್‌ ಅಂಗಳದಲ್ಲಿ ಮಿನುಗುತ್ತಿರುವ ರಶ್ಮಿಕಾ ಮುಂದಿನ ದಿನಗಳಲ್ಲಿ ಅಲ್ಲಿಯೇ ಸೆಟಲ್‌ ಆದರೂ ಅಚ್ಚರಿ ಪಡಬೇಕಿಲ್ಲ.

 

Share Post