ನಟಿ ರಶ್ಮಿಕಾ ಮಂದಣ್ಣ ಡೀಪ್ ಫೇಕ್ ಪ್ರಕರಣ; ದೆಹಲಿಯಲ್ಲಿ ನಾಲ್ವರ ಅರೆಸ್ಟ್!
ನವದೆಹಲಿ; ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಬೇರೆ ಮಹಿಳೆಯ ವಿಡಿಯೋಗೆ ರಶ್ಮಿಕಾ ಅವರ ಫೇಸ್ ಮರ್ಜ್ ಮಾಡಿ ಅದನ್ನು ವೈರಲ್ ಮಾಡಲಾಗಿತ್ತು. ಈ ಸಂಬಂದ ತನಿಖೆ ಕೈಗೊಂಡಿದ್ದ ಪೊಲೀಸರು, ದೆಹಲಿಯಲ್ಲಿ ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ. ಅವರನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದೆ.
ಜಾರಾ ಪಟೇಲ್ ಎಂಬ ಯುವತಿಯ ವಿಡಿಯೋ ಬಳಸಿಕೊಂಡಿರುವ ಆರೋಪಿಗಳು ಡೀಪ್ ಫೇಕ್ ಬಳಸಿ, ಜಾರಾ ಪಟೇಲ್ ಮುಖಕ್ಕೆ ರಶ್ಮಿಕಾ ಮುಖವನ್ನು ಡೀಪ್ ಫೇಕ್ ಮೂಲಕ ಮರ್ಜ್ ಮಾಡಿದ್ದರು. ಈ ವಿಡಿಯೋ ಸತ್ಯದ ತಲೆ ಮೇಲೆ ಹೊಡೆದಂತೆ ಇತ್ತು. ಈ ವಿಡಿಯೋ ಬಗ್ಗೆ ದೇಶಾದ್ಯಂತ ಚರ್ಚೆ ಶುರುವಾಗಿತ್ತು. ಇದೀಗ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಇದರ ಹಿಂದೆ ಇರುವ ಮುಖ್ಯ ವ್ಯಕ್ತಿಗಳಿಗಾಗಿ ಇನ್ನೂ ಹುಡುಕಾಟ ಮುಂದುವರೆದಿದೆ.