BengaluruCrime

ರಾಜಧಾನಿ ಬೆಂಗಳೂರಲ್ಲಿ ಎಗಿಲ್ಲದೆ ನಡೆಯುತ್ತಿದೆ ಸೈಬರ್ ಕಳ್ಳರ ಕೈಚಳಕ

ಬೆಂಗಳೂರು;  ವರ್ಷದ ಮೊದಲ ತಿಂಗಳಲ್ಲೆ ಖದೀಮರಿಂದ ಭರ್ಜರಿ ದೋಖಾ ಮಾಡಿದ್ದಾರೆ. ಜನವರಿ ತಿಂಗಳೊಂದರಲ್ಲೆ ಬರೋಬ್ಬರಿ 1228 ಸೈಬರ್ ವಂಚನೆ ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗಿದೆ. ಕಳೆದ ವರ್ಷವೂ ಅತಿ ಹೆಚ್ಚು ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿದ್ದವು. ಈಗ ವರ್ಷದ ಮೊದಲ ತಿಂಗಳಲ್ಲೆ ಸೈಬರ್ ವಂಚಕರು ಆರ್ಭಟಿಸಿದ್ದಾರೆ.

ಜನವರಿಯಲ್ಲಿ ಬೆಂಗಳೂರಿನ ವಿವಿಧ ಸೈಬರ್‌ ನೆಟ್‌ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳ ವಿವರ ಇಲ್ಲಿದೆ.

ಕೇಂದ್ರ ವಿಭಾಗದ ಸೆನ್ ಪೊಲೀಸ್ ಠಾಣೆ -90
ದಕ್ಷಿಣ ವಿಭಾಗದ ಸೆನ್ ಪೊಲೀಸ್ ಠಾಣೆ-145
ಉತ್ತರ ವಿಭಾಗ ಸೆನ್ ಪೊಲೀಸ್ ಠಾಣೆ -215
ಪೂರ್ವ ವಿಭಾಗ ಸೆನ್ ಪೊಲೀಸ್ ಠಾಣೆ-122
ಪಶ್ಚಿಮ ವಿಭಾಗ ಸೆನ್ ಪೊಲೀಸ್ ಠಾಣೆ -118
ಅಗ್ನೇಯ ವಿಭಾಗ ಸೆನ್ ಪೊಲೀಸ್ ಠಾಣೆ-223
ಈಶಾನ್ಯ ವಿಭಾಗ ಸೆನ್ ಪೊಲೀಸ್ ಠಾಣೆ-155
ವೈಟ್ ಫೀಲ್ಡ್ ವಿಭಾಗದ ಸೆನ್ ಪೊಲೀಸ್ ಠಾಣೆ-160

ಒಂದು ತಿಂಗಳಲ್ಲೆ ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ. ಇನ್ನು ಸೆನ್ ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿಗಳ ಕೊರತೆಯಿಂದ ಪರದಾಡುತ್ತಿದ್ದಾರೆ. ಇದ್ರಿಂದಾಗಿ ಸೈಬರ್ ಕ್ರೈಂ ಪ್ರಕರಣಗಳು ಸರಿಯಾಗಿ ತನಿಖೆಯಾಗದೆ ಆತಂತ್ರವಾಗುತ್ತಿದೆ. ಈಗ ವಿಭಾಗೀಯ ಮಟ್ಟದಲ್ಲಿ ಮಾತ್ರ ಪೊಲೀಸ್ ಸೆನ್ ಪೊಲೀಸ್ ಠಾಣೆಗಳಿವೆ. ಇದನ್ನ ಉಪ ವಿಭಾಗದ ಮಟ್ಡದಲ್ಲಿ ತೆರಯುವ ಮೂಲಕ ಶೀಘ್ರ ತನಿಖೆಗೆ ಮುಂದಾಗಬೇಕು. ರಾಜ್ಯ ಸಕಾ೯ರ ಇಬ್ಬಗೆ ಗಮನ ಹರಿಸಬೇಕಾಗಿದೆ.

Share Post