Cinema

ರಾಧೆ ಶ್ಯಾಮ್‌ ಚಿತ್ರದ ಹೊಸ ಬಿಡುಗಡೆ ದಿನಾಂಕ ಫಿಕ್ಸ್‌

ಹೈದರಾಬಾದ್‌ : ಪ್ರಭಾಸ್‌ ಅಭಿನಯದ ರಾಧೆ ಶ್ಯಾಮ್‌ ಚಿತ್ರ ತನ್ನ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಜನವರಿ 14ಕ್ಕೆ ಬಿಡುಗಡೆ ಮಾಡುವುದಾಗಿ ಹೇಳಿದ್ದ ಚಿತ್ರತಂಡ ಕೊರೊನಾ ಮೂರನೇ ಅಲೆಯ ಕಾರಣದಿಂದ ಮುಂದಕ್ಕೆ ಹೋಗಿತ್ತು. ಮುಂದಿನ ದಿನಾಂಕವನ್ನು ಸದ್ಯದಲ್ಲಿಯೇ ಅನೌನ್ಸ್‌ ಮಾಡುವುದಾಗಿ ತಿಳಿಸಿತ್ತು. ಈಗ ಸಿನಿಮಾ ತಂಡ ಘೋಷಣೆ ಮಾಡಿದೆ.

ಚಿತ್ರತಂಡದವರು ಈಗ ನೂತನ ರಿಲೀಸ್‌ ಡೇಟ್‌ ಅನ್ನು ಘೋಷಿಸಿದ್ದಾರೆ. ಪ್ರಭಾಸ್‌ ಮತ್ತು ಪೂಜಾ ಹೆಗ್ಡೆಯವರ ಪ್ಯಾನ್‌ ಇಂಡಿಯಾ ಸಿನಿಮಾ ಆಗಿರುವ ರಾಧೆ ಶ್ಯಾಮ್‌ ಮಾರ್ಚ್ 11, 2022 ರಂದು ಥಿಯೇಟರ್‌ಗಳಿಗೆ ಬರಲಿದೆ. ಪ್ರಭಾಸ್‌ ಅವರು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

 

View this post on Instagram

 

A post shared by Prabhas (@actorprabhas)

Share Post