ರಾಧೆ ಶ್ಯಾಮ್ ಚಿತ್ರ – ಓಟಿಟಿ ಕೊಟ್ಟ ಆಫರ್ 350 ಕೋಟಿ
ಹೈದರಾಬಾದ್ : ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯದ ರಾಧೆ ಶ್ಯಾಮ್ ಸಿನಿಮಾ ಸಖತ್ ಹೈಪ್ ಹುಟ್ಟು ಹಾಕಿದೆ. ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಈ ಸಿನಿಮಾ ಇದೇ ಜನವರಿ 14ಕ್ಕೆ ಬಿಡುಗಡೆಗೊಳ್ಳಬೇಕಿದೆ. ಆದರೆ ಹೆಚ್ಚುತ್ತಿರುವ ಕೊರೊನಾ ಮತ್ತು ಓಮಿಕ್ರಾನ್ ಸೋಂಕು ಗಮನದಲ್ಲಿಟುಕೊಂಡು ಸಾಕಷ್ಟು ರಾಜ್ಯಗಳು ಹಲವು ಸಾರ್ವಜನಿಕ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರುತ್ತಿದೆ. ಇದನ್ನು ಗಮನದಲ್ಲಿರಿಸಿಕೊಂಡು ಓಟಿಟಿ ದೈತ್ಯರು ರಾಧೆ ಶ್ಯಾಮ್ ಸಿನಿಮಾ ಪಡೆಯಲು ಬಹು ಕೋಟಿ ಆಫರ್ ಮಾಡಿರುವುದಾಗಿ ತಿಳಿದು ಬಂದಿದೆ.
ದೆಹಲಿ, ವೆಸ್ಟ್ ಬೆಂಗಾಲ್ ಸೇರಿದಂತೆ ಹಲವು ಕಡೆ ಈಗಾಗಲೇ ಚಿತ್ರಮಂದಿರಗಳನ್ನು ಮುಚ್ಚಲಾಗಿದೆ. ಇನ್ನು ಬಹುತೇಕ ರಾಜ್ಯಗಳು 50 ಪ್ರತಿಶತ ಆಸನಕ್ಕೆ ಮಾತ್ರ ಅವಕಾಶ ನೀಡಿವೆ. ಒಂದು ವೇಳೆ ಸಿನಿಮಾ ನಿಗದಿಯಾದಂತೆ ಜನವರಿಯಲ್ಲಿ ಬಿಡುಗಡೆಯಾದರೆ ಲಾಸ್ ಆಗೋದು ಪಕ್ಕಾ ಅಂತಿದ್ದಾರೆ ಸಿನಿ ಪಂಡಿತರು. ಆದರೆ ಸಿನಿ ರಸಿಕರು ಮಾತ್ರ ನೆಚ್ಚಿನ ನಟನ ಸಿನಿಮಾವನ್ನು ದೊಡ್ಡ ಪರದೆಯಲ್ಲಿಯೇ ನೋಡಬೇಕು ಎಂದು ಕಾದು ಕುಳಿತಿದ್ದಾರೆ. ಎಲ್ಲದರ ನಡುವೇ ಸಿನಿಮಾ ತಂಡ ಮಾತ್ರ ಮೌನಕ್ಕೆ ಶರಣಾಗಿದೆ. ರಿಲೀಸ್ ಡೇಟ್ ಬಗ್ಗೆ ಬದಲಾವಣೆ ಬಗ್ಗೆ ಅವರೇನು ಹೇಳಿಲ್ಲ.
ರಾಧೆ ಶ್ಯಾಮ್ ಪ್ಯಾನ್ ಇಂಡಿಯಾ ಸಿನಿಮಾ ಆದ ಕಾರಣ ಓಟಿಟಿಗಳು ದೊಡ್ಡ ಮೊತ್ತದ ಆಫರ್ ನೀಡ್ತಿವೆ. ಸಿನಿಮಾ ತಂಡ ಏನಾದರೂ ನೇರವಾಗಿ ಓಟಿಟಿಯಲ್ಲಿ ರಿಲೀಸ್ ಮಾಡಿದರೆ ದೊಡ್ಡ ಮೊತ್ತ ಕೊಡುವುದಾಗಿ ಹೇಳಿದ್ದಾರೆ. ನೆಟ್‌ಫ್ಲಿಕ್ಸ್ ಸಂಸ್ಥೆ ರಾಧೆ ಶ್ಯಾಮ್ ಚಿತ್ರತಂಡಕ್ಕೆ 300ಕೋಟಿ ಆಫರ್ ಮಾಡಿದೆ. ಇನ್ನು ಅಮೇಜಾನ್ ಪ್ರೈಮ್ 350 ಕೋಟಿ ಆಫರ್ ನೀಡಿದೆ ಎಂದು ವರದಿಯಾಗಿದೆ.
ಕಂಪನಿಗಳು ನೀಡಿದ ನೇರವಾಗಿ ಓಟಿಟಿ ಬಿಡುಗಡೆ ಆಫರ್ಅನ್ನು ನಯವಾಗಿಯೇ ಚಿತ್ರತಂಡ ತಿರಸ್ಕರಿಸಿದೆ. ಇಂತಹ ಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದರೇ ಚೆನ್ನ. ಆದ್ದರಿಂದ ನೇರವಾಗಿ ಓಟಿಟಿಯಲ್ಲಿ ತೆರೆಕಾಣಿಸುವ ಯಾವುದೇ ಯೋಜನೆಗಳಿಲ್ಲ ಎಂದಿದೆ ಚಿತ್ರತಂಡ. ಇದು ಪ್ರಭಾಸ್ ಅಭಿಮಾನಿಗಳೂ ಸೇರಿ ಚಿತ್ರ ಪ್ರೇಮಿಗಳಿಗೆ ಸಮಾಧಾನ ತಂದಿದೆ.
ಚಿತ್ರ ಜನವರಿಯಲ್ಲಿ ಬಿಡುಗಡೆಯಾಗುವುದು ಬಹುತೇಕ ಡೌಟ್ ಇದೆ. ಕೋವಿಡ್ ಕಾರಣದಿಂದ ಮುಂದೋಗಬಹುದು.