ಪುನೀತ್ ಅಗಲಿ ಇಂದಿಗೆ ಎರಡು ತಿಂಗಳು, ಸಮಾಧಿಗೆ ಕುಟುಂಬಸ್ಥರಿಂದ ಪೂಜೆ
ಬೆಂಗಳೂರು: ಸ್ಯಾಂಡಲ್ ವುಡ್ ಯುವರತ್ನ , ಪವರ್ ಸ್ಟಾರ್ ಅಗಲಿ ಇಂದಿಗೆ ಎರಡು ತಿಂಗಳಗಿದೆ. ಆದರೆ ಅವರು ನೆನಪು ಮಾತ್ರ ಪ್ರತಿಯೊಬ್ಬರ ಮನದಲ್ಲಿ ಹಾಗೇ ಉಳಿದುಕೊಂಡಿದೆ. ಜೊತೆಗೆ ಪ್ರತಿನಿತ್ಯ ಸಾವಿರಾರೂ ಸಂಖ್ಯೆಯ ಆಭಿಮಾವಿಗಳು ಕಂಠೀವ ಸ್ಟುಡಿಯೋಗೆ ತೆರಳಿ ಪುನೀತ್ ಸಮಾಧಿ ದರ್ಶನ ಮಾಡುತ್ತಿದ್ದಾರೆ.
ಇಂದು ಪುನೀತ್ ಅಗಲಿ ಎರಡು ತಿಂಗಳು ಆಗಿರುವ ಹಿನ್ನೆಲೆಯಲ್ಲಿ ಕುಟುಂಬಸ್ಥರು ಪುನೀತ್ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದರು.
ಇಂದು ಬೆಳಗ್ಗೆ ರಾಘವೇಂದ್ರ ರಾಜ್ಕುಮಾರ್, ಪುನೀತ್ ಪತ್ನಿ ಅಶ್ವಿನಿ, ಮಕ್ಕಳಾದ ದೃತಿ ಅವರ ಹಿರಿಯ ಅಕ್ಕ ಲಕ್ಷ್ಮಿ ಹಾಗೂ ಮಾವ ಗೋವಿಂದರಾಜ್, ನಟ ಶಿವರಾಜ್ ಕುಮಾರ್ , ಪ್ರಜ್ವಲ್ ದೇವರಾಜ್ ಸೇರಿದಂತೆ ಕುಟುಂಬದವರು ಹಾಗೂ ಚಿತ್ರರಂಗದ ಅನೇಕ ಗಣ್ಯರು ಅಪ್ಪು ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ನಂತರ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್ ಮಾತನಾಡಿ, ಅಪ್ಪಾಜಿ ಹುಟ್ಟುಹಬ್ಬದಿನದಂದು ನಾನು ಮತ್ತು ಶಿವಣ್ಣ ದೇಹದಾನ ಮಾಡಿದ್ದೇನೆ ಎಂದರು.