Cinema

ಬಾಕ್ಸಾ ಫೀಸ್‌ನಲ್ಲಿ ಧೂಳೆಬ್ಬಿಸಿದ ಪುಷ್ಪ, ೩ದಿನದಲ್ಲಿ ಗಳಿಕೆ ಎಷ್ಟು

ಟಾಲಿವುಡ್: ಯಾವುದೇ ಸಿನಿಮಾ ಆದ್ರೂ ಬಿಡುಗಡೆಗೂ ಮುನ್ನ ಭಾರಿ ಸದ್ದು ಮಾಡುತ್ತದೆ. ಅಷ್ಟೇ ಅಲ್ಲದೇ ರಿಲೀಸ್‌ ಆದ್ಮೇಲೂ ಅದೇ ರೀತಿ ಹೈಪ್‌ ಕ್ರಿಯೇಟ್‌ ಮಾಡುತ್ತದೆ.
ಅಲ್ಲು ಅರ್ಜುನ್ ಪುಷ್ಪ ಈ ಪರೀಕ್ಷೆಯಲ್ಲಿ ಗೆದ್ದು ಬೀಗಿದೆ. ಮೊದಲ ವಾರ ಅಲ್ಲು ಅರ್ಜುನ್ ‘ಪುಷ್ಪ’ ಬಾಕ್ಸಾ ಫೀಸ್‌ನಲ್ಲಿ ತನ್ನ ಹಾವಳಿಯನ್ನು ಮುಂದುವರೆಸಿದೆ. ಬಿಡುಗಡೆಯಾದ ಕಡೆಗಳಲ್ಲೆಲ್ಲಾ ಗಲ್ಲಾಪೆಟ್ಟಿಗೆಯನ್ನು ದೋಚುತ್ತಲೇ ಇದೆ. ಮೂರು ದಿನಗಳಲ್ಲಿ ಪುಷ್ಪ ದುಪ್ಪಟ್ಟು ಲೂಟಿ ಮಾಡಿದೆ.
ಪುಷ್ಪ ಕೇವಲ ಆಂಧ್ರ, ತೆಲಂಗಾಣದಲ್ಲಿ ಅಷ್ಟೇ ಅಲ್ಲ. ವಿಶ್ವದಾದ್ಯಂತ ಅಲ್ಲು ಅರ್ಜುನ್ ಸಿನಿಮಾ ಗ್ರ್ಯಾಂಡ್ ಆಗಿ ತೆರೆಕಂಡಿತ್ತು. ಫಸ್ಟ್ ಡೇ ಫಸ್ಟ್ ಶೋನೇ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಿದ್ದರೂ, ಮೂರು ದಿನಗಳಲ್ಲಿ ಸಿನಿಮಾ ಗಳಿಕೆಯಲ್ಲಿ ಹಿಂದೆ ಬಿದಿಲ್ಲ. ಬಾಲಯ್ಯನ ‘ಅಖಂಡ’ ಬಳಿಕ ಅಲ್ಲು ಅರ್ಜುನ್ ಪುಷ್ಪ ಭರ್ಜರಿ ಸದ್ದು ಮಾಡುತ್ತಿದೆ.ಮೊದಲ ದಿನವೇ ಪುಷ್ಪಗೆ ಸಿಕ್ಕಿರುವ ರೆಸ್ಪಾನ್ಸ್ ನೋಡಿದರೆ, ಬಾಕ್ಸಾ ಫೀಸ್‌ನಲ್ಲಿ ನಿರೀಕ್ಷೆಗೂ ಮೀರಿ ಗಳಿಕೆ ಕಂಡಿದೆ. ಪುಷ್ಪ ವಿಶ್ವದಾದ್ಯಂತ ಬರೋಬ್ಬರಿ 173 ಕೋಟಿ ಲೂಟಿ ಮಾಡಿದೆ ಎನ್ನಲಾಗಿದೆ. ಪುಷ್ಪ ಎಲ್ಲೆಲ್ಲಿ ತೆರೆಕಂಡಿತ್ತೋ, ಅಲ್ಲೆಲ್ಲಾ ಗಳಿಕೆ ಗಗನಕ್ಕೇರಿದೆ.ಆಂಧ್ರ ಹಾಗೂ ತೆಲಂಗಾಣ ಈ ಎರಡೂ ರಾಜ್ಯಗಳಿಂದಲೂ ಬರೋಬ್ಬರಿ 78 ಕೋಟಿ ಗಳಿಕೆ ಆಗಿದೆ.

Share Post