ಅಭಿಷೇಕ್ ಅಂಬರೀಶ್ ಅವರಿಗೆ ಡಿ.11ಕ್ಕೆ ಎಂಗೇಜ್ಮೆಂಟ್
ಬೆಂಗಳೂರು; ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥದ ಬಗ್ಗೆ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಈ ವಿಚಾರ ಸಂಬಂಧ ಸುಮಲತಾ ಅಂತೇದ್ದೇನೂ ಇಲ್ಲ ಎಂದು ಹೇಳಿದ್ದರು. ಈ ಬೆನ್ನಲ್ಲೇ ನಿನ್ನೆ ಅಂಬರೀಶ್ ಅವರ ಮನೆಯಲ್ಲೇ ತಾಂಬೂಲ ಬದಲಿಸಿಕೊಳ್ಳುವ ಶಾಸ್ತ್ರ ಕೂಡ ಮುಗಿದಿದೆ ಎನ್ನಲಾಗುತ್ತಿದೆ. ಡಿಸೆಂಬರ್ 11 ರಂದು ಎಂಗೇಜ್ಮೆಂಟ್ ನಡೆಯಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಖ್ಯಾತ ಫ್ಯಾಷನ್ ಡಿಸೈನರ್ ಪುತ್ರಿ ಹಾಗೂ ಬಹುಕಾಲದ ಗೆಳತಿಯೊಂದಿಗೆ ಅಭಿಷೇಕ್ ಎಂಗೇಜ್ಮೆಂಟ್ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನ ಪ್ರತಿಷ್ಠಿತ ಸ್ಟಾರ್ ಹೋಟೆಲ್ ನಲ್ಲಿ ಎಂಗೇಜ್ಮೆಂಟ್ ನಡೆಯಲಿದ್ದು, ರಜಿನಿಕಾಂತ್ ಸೇರಿ ಹಲವು ಚಿತ್ರರಂಗದ ದಿಗ್ಗಜರು ಭಾಗವಹಿಸಲಿದ್ದಾರಂತೆ.