ಗೋವಾದಲ್ಲಿ ಹಸೆಮಣೆ ಏರಿದ ಮೌನಿರಾಯ್
ಪಣಜಿ : ಬಾಲಿವುಡ್ ಕಿರುತೆರೆ ನಟಿ ನಾಗಿನ್ ಮೌನಿರಾಯ್ ಇಂದು ಗೋವಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೂರಜ್ ನಂಬಿಯಾರ್ ಅವರೊಂದಿಗೆ ಹಸೆಮಣೆ ಏರಿದ ಮೌನಿರಾಯ್ ಅವರಿಗೆ ಶುಭಾಷಯಗಳ ಮಹಾಪೂರವೇ ಹರಿದು ಬರುತ್ತಿದೆ.
ಮೌನಿರಾಯ್ ಅವರು ಕೆಂಪು ಮತ್ತು ಚಿನ್ನದ ಬಾರ್ಡರ್ ಇರುವ ಬಿಳಿ ಸೀರೆ ಉಟ್ಟು ಕಂಗೊಳಿಸುತ್ತಿದ್ದಾರೆ. ಇನ್ನು ಸೂರಜ್ ಅವರು ಕುರ್ತಾ ಮತ್ತು ಬಿಳಿ ಧೋತಿಯಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ. ಮೌನಿರಾಯ್ ಅವರ ಸಹನಟ ಅರ್ಜುನ್ ಬಿಜ್ಲಾನಿ ಮದುವೆಯ ಕೆಲ ಅದ್ಭುತ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.
View this post on Instagram