Cinema

ಲಕ್ಕಿಮ್ಯಾನ್‌ ಸಿನಿಮಾದಲ್ಲಿ ಪುನೀತ್‌ಗೆ ವಿಶೇಷ ಪಾತ್ರ

ಸ್ಯಾಂಡಲ್‌ ವುಡ್‌ : ನಟ ಪುನೀತ್‌ ರಾಜ್‌ ಕುಮಾರ್‌ ಅಭಿನಯದ ಜೇಮ್ಸ್‌ ಚಿತ್ರ ಬಿಡುಗಡೆಯ ಹಂತದಲ್ಲಿದೆ. ಈ ಸಿನಿಮಾ ನಟ ಪುನೀತ್‌ ರಾಜ್‌ ಕುಮಾರ್‌ ಕೊನೆಯದಾಗಿದೆ. ಹೀಗಾಗಿ ಈಸಿನಿಮಾದಲ್ಲಿ ಅಪ್ಪು ಕಣ್ತುಂಬಿಕೊಳ್ಳುವವುದಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದೀಗ ಚಿತ್ರತಂಡ ಯುವರತ್ನನ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಇದನ್ನು ಕೇಳಿ ಅಪ್ಪು ಅಭಿಮಾನಿಗಳು ಸಖತ್‌ ಖುಷಿ ಆಗಿದ್ದಾರೆ. ಏನಾಪ್ಪ ಅಂದರೆ ಲಕ್ಕಿಮ್ಯಾನ್‌ ಸಿನಿಮಾದಲ್ಲಿ ಪುನೀತ್‌ ರಾಜ್ ಕುಮಾರ್‌ ಗೆ ವಿಶೇಷ ಪಾತ್ರ ನೀಡಿದ್ದಾರೆ.
ಹೌದು ಡಾರ್ಲಿಂಗ್‌ ಕೃಷ್ಣ ಅಭಿನಯದ ಬಹುನಿರೀಕ್ಷೆಯ ಚಿತ್ರ ಲಕ್ಕಿಮ್ಯಾನ್‌ ಪೋಸ್ಟರ್‌ ರಿಲೀಸ್‌ ಆಗಿದೆ. ಈ ಚಿತ್ರದಲ್ಲಿ ಪುನೀತ್‌ ರಾಜ್ ಕುಮಾರ್‌ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಈಗಾಗಲೇ ರಿಲೀಸ್‌ ಆದ ಪೋಸ್ಟರ್‌ ನಲ್ಲಿ ಅಪ್ಪು ಗಮನ ಸೆಳೆದಿದ್ದಾರೆ. ಇದೀಗ ಸಾಮಾಜಿಕ ಜಾಲತಾಗಳಲ್ಲಿ ಈ ಪೋಸ್ಟರ್‌ ವೈರಲ್‌ ಆಗಿದೆ.
ಇನ್ನು ಚಿತ್ರದ ಪೋಸ್ಟರ್‌ ರಿಲೀಸ್‌ ಮಾಡಿದ ಚಿತ್ರತಂಡ, ಹೊಸ ವರ್ಷದ ಶುಭಾಶಯ ಕೋರಿದೆ. ಪೋಸ್ಟರ್‌ನಲ್ಲಿ ಮದುಮಗನಂತೆ ಡಾರ್ಲಿಂಗ್‌ ಕೃಷ್ಣ ಕಂಗೊಳಿಸಿದ್ದಾರೆ.ಈ ಚಿತ್ರಕ್ಕೆ ಪ್ರಭುದೇವ್‌ ಸಹೋದರ ನಾಗೇಂದ್ರ ಪ್ರಸಾದ್‌ ನಿರ್ದೇಶನ ಮಾಡಿದ್ದಾರೆ. ಪರ್ಸಾ ಪಿಕ್ಚರ್ಸ್ ಬ್ಯಾನರ್​ಮೂಲಕ ನಿರ್ಮಾಣವಾಗುತ್ತದೆ.

 

Share Post