Cinema

ತಮ್ಮ ಹೆಸರಿಂದ ಪವರ್‌ ಸ್ಟಾರ್‌ ಅನ್ನು ತೆಗೆಯುವಂತೆ ಮನವಿ ಮಾಡಿದ್ರು ಪುನೀತ್‌ : ಅಮೋಘವರ್ಷ

ಬೆಂಗಳೂರು : ದಿ.ಪುನೀತ್‌ ರಾಜ್‌ಕುಮಾರ್‌ ಅವರ ಅಭಿನಯದ ಗಂಧದ ಗುಡಿ ಚಿತ್ರದ ಟೈಟಲ್‌ ಟೀಸರ್‌ ಇಂದು ಬಿಡುಗಡೆಯಾಗಿದೆ. ಎಲ್ಲರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಗಂಧದ ಗುಡಿ ಚಿತ್ರದ ನಿರ್ದೇಶಕ ಅಮೋಘವರ್ಷ ಇಂದು ತಮ್ಮ ಸಿನಿಮಾ ಬಗ್ಗೆ ಮಾತನಾಡಿ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ʼಅಪ್ಪು ಸರ್‌ ಅವರು ಎಂದಿಗೂ ಸೆಲೆಬ್ರಿಟಿ ರೀತಿ ನಡೆದುಕೊಳ್ಳಲೇ ಇಲ್ಲ. ಈ ಚಿತ್ರದಲ್ಲಿ ನ್ಯಾಚುರಲ್‌ ಆಗಿ ಕಾಣಬೇಕೆಂಬ ಕಾರಣಕ್ಕೆ ಮೇಕಪ್‌ ಇಲ್ಲದೇ ನಟಿಸಿದ್ದಾರೆ. ಸಿನಿಮಾದ ಟೀಸರ್‌ ನೋಡಿದ್ದ ಪುನೀತ್‌ ಅವರು ನನ್ನದು ಒಂದು ರಿಕ್ವೆಸ್ಟ್‌ ಇದೆ, ದಯವಿಟ್ಟು ಪವರ್‌ ಸ್ಟಾರ್‌ ಅನ್ನೋದನ್ನ ತೆಗೆಯಿರಿʼ ಎಂದು ಹೇಳಿದ್ದರು.

ಈ ಚಿತ್ರ ಒಂದು ಎವರ್‌ಗ್ರೀನ್‌ ಸಿನಿಮಾ ಆಗಿ ಉಳಿಯಲಿದೆ ಎಂದು ನಿರ್ದೇಶಕರು ಹೇಳಿದ್ದಾರೆ.

Share Post