ಮಯನ್ಮಾರ್ ನಾಯಕಿ ಆಂಗ್ ಸ್ಯಾನ್ ಸೂಕಿಗೆ 4 ವರ್ಷ ಜೈಲು ಶಿಕ್ಷೆ
ಮಯನ್ಮಾರ್: ಮಯನ್ಮಾರ್ ನಾಯಕಿ ಆಂಗ್ ಸ್ಯಾನ್ ಸೂಕಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಪ್ರಕೃತಿ ವೈಪರೀತ್ಯ ಕಾನೂನು ಉಲ್ಲಂಘನೆ ಹಾಗಗೂ ಪ್ರೇರೇಪಣೆ ಮುಂತಾದ ಆರೋಪಗಳಲ್ಲಿ ಸೂಕಿ ದೋಷಿ ಎಂದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಸೂಕಿಗೆ 4 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಸೂಕಿ ವಿರುದ್ಧ ಒಟ್ಟು 11 ಆರೋಪಗಳಿವೆ. ಇದರಲ್ಲಿ ಒಂದು ಕೇಸ್‌ನಲ್ಲಿ ಮಾತ್ರ ಶಿಕ್ಷೆಯಾಗಿದೆ. ಎಲ್ಲಾ ಕೇಸ್‌ಗಳಲ್ಲೂ ಶಿಕ್ಷೆಯಾದರೆ ನೂರು ವರ್ಷ ಶಿಕ್ಷೆ ಬೀಳಬಹುದು ಎಂದು ಹೇಳಲಾಗುತ್ತಿದೆ. ಪ್ರಜಾಪ್ರಭುತ್ವ ಸರ್ಕಾರ ನಡೆಸುತ್ತಿದ್ದ ಸೂಕಿ ಫೆಬ್ರವರಿಯಲ್ಲಿ ಸೈನ್ಯ ಬಂಡೆದ್ದಿದ್ದರಿಂದಾಗಿ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದರು. ಅನಂತರ ಮಯನ್ಮಾರ್‌ನಲ್ಲಿ ಸೈನ್ಯಾಡಳಿತ ಜಾರಿಯಾಗಿತ್ತು. ಈ ವೇಳೆ ಆಂಗ್ ಸಾನ್ ಸೂಕಿಯವರನ್ನು ಬಂಧಿಸಲಾಗಿತ್ತು.