ಪವನ್ ಕಲ್ಯಾಣ್ ಕೆಂಡಾಮಂಡಲ!; ಪ್ರಕಾಶ್ ರಾಜ್ ಸಮಜಾಯಿಷಿ ಏನು..?
ಬೆಂಗಳೂರು; ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ದೇಶದಲ್ಲಿ ಸನಾತನ ಧರ್ಮ ರಕ್ಷಣಾ ಬೋರ್ಡ್ ರಚನೆ ಮಾಡಬೇಕೆಂದು ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಹೇಳಿದ್ದರು.. ಇದಕ್ಕೆ ಎಕ್ಸ್ ನಲ್ಲಿ ನಟ ಪ್ರಕಾಶ್ ರಾಜ್ ಆಕ್ರೋಶ ವ್ಯಕ್ತಪಡಿಸಿದ್ದರು.. ಅದು ನಿಮ್ಮ ರಾಜ್ಯದ ಸಮಸ್ಯೆ, ದೇಶಕ್ಕೆ ಹರಡಲು ಹೋಗಬೇಡಿ ಎಂದಿದ್ದರು.. ಇದಕ್ಕೆ ಪವನ್ ಕಳ್ಯಾಣ್ ಪ್ರಕಾಶ್ ರಾಜ್ ವಿರುದ್ಧ ಹರಿಹಾಯ್ದಿದ್ದಾರೆ..
ಪವನ್ ಕಲ್ಯಾಣ್ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಪ್ರಕಾಶ್ ರಾಜ್ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಪವನ್ ಕಲ್ಯಾಣ್ ಅವರೇ ನೀವು ನನ್ನ ಹೇಳಿಕೆಯನ್ನು ತಪ್ಪಾಗಿ ತಿಳಿದುಕೊಂಡಿದ್ದೀರಿ. ಸಮಯ ಇದ್ದರೆ ನನ್ನ ಟ್ವೀಟ್ ಅನ್ನು ಮತ್ತೊಮ್ಮೆ ಓದಿ. ನಾನು ಹೇಳಿದ್ದೇ ಬೇರೆ, ನೀವು ಮಾತನಾಡಿರುವುದೇ ಬೇರೆ.. ನಾನು ವಿದೇಶದಲ್ಲಿ ಶೂಟಿಂಗ್‌ನಲ್ಲಿ ಇದ್ದೇನೆ.. ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ಬಂದ ಮೇಲೆ ಈ ಬಗ್ಗೆ ವಿವರವಾಗಿ ಬರೆಯುತ್ತೇನೆ ಎಂದು ಹೇಳಿದ್ದಾರೆ..
ಮೊನ್ನೆ ಪ್ರಕಾಶ್ ರಾಜ್ ಮಾಡಿದ್ದ ಟ್ವೀಟ್ ಸುದ್ದಿ ಏನಾಗಿತ್ತು..?
ಬೆಂಗಳೂರು; ತಿರುಪತಿ ಲಡ್ಡು ತಯಾರಿಕೆಯಲ್ಲಿ ದನದ ಕೊಬ್ಬು ಬಳಸಲಾಗಿತ್ತು ಎಂಬ ವಿಚಾರವಾಗಿ ಆಂಧ್ರಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ನೀಡಿರುವ ಹೇಳಿಕೆಯನ್ನು ನಟ ಪ್ರಕಾಶ್ ರಾಜ್ ಖಂಡಿಸಿದ್ದಾರೆ.. ಪವನ್ ಕಲ್ಯಾಣ್ ಮಾಡಿರುವ ಎಕ್ಸ್ ಪೋಸ್ಟ್‌ಗೆ ಪ್ರತಿಕ್ರಿಯೆ ಕೊಟ್ಟಿರುವ ಪ್ರಕಾಶ್ ರಾಜ್, ಅವರ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ..
ತಿಮ್ಮಪ್ಪ ಪ್ರಸಾದವಾದ ಲಡ್ಡು ತಯಾರಿಕೆಯಲ್ಲಿ ಮೀನಿನ ಎಣ್ಣೆ, ದನದ ಕೊಬ್ಬು ಹಾಗೂ ಹಂದಿ ಕೊಬ್ಬಿರೋ ತುಪ್ಪ ಬಳಸಿರುವ ವಿಚಾರ ಕೇಳಿ ನನಗೆ ಶಾಕ್ ಆಗಿದೆ.. ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇನೆ.. ತಪ್ಪಿತಸ್ಥರನ್ನು ಅರೆಸ್ಟ್ ಮಾಡುತ್ತೇವೆ.. ದೇಶದ ಎಲ್ಲಾ ದೇವಾಲಯಗಳ ರಕ್ಷನೇಗೆ ಸನಾತನ ಧರ್ಮ ರಕ್ಷಣಾ ಬೋರ್ಡ್ ರಚನೆ ಆಗಬೇಕು ಎಂದು ಪವನ್ ಕಲ್ಯಾಣ್ ಎಕ್ಸ್ ಮಾಡಿದ್ದರು.. ಇದಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ನಟ ಪ್ರಕಾಶ್ ರಾಜ್, ನೀವು ಡಿಸಿಎಂ ಆಗಿರುವ ಆಂಧ್ರಪ್ರದೇಶದಲ್ಲೇ ತಿರುಪತಿ ಇರೋದು.. ತಪ್ಪಿತಸ್ಥರನ್ನು ಹುಡುಕಿ ಶಿಕ್ಷೆ ಕೊಡಿ.. ಅದು ನಿಮ್ಮ ರಾಜ್ಯದ ವಿಚಾರ.. ಅದನ್ನು ದೇಶಕ್ಕೆ ಯಾಕೆ ವಿಸ್ತರಣೆ ಮಾಡುತ್ತೀರಿ.. ಈಗಾಗಲೇ ದೇಶದಲ್ಲಿ ಕೋಮು ಸಮಸ್ಯೆಗಳಿವೆ.. ಇದರ ನಡುವೆ ಇದಕ್ಕೆ ಕೋಮು ಬಣ್ಣ ಕಟ್ಟಿ ದೇಶಾದ್ಯಂತ ಗಲಭೆ ಎಬ್ಬಿಸಬೇಡಿ ಎಂದು ಹೇಳಿದ್ದಾರೆ..