CinemaNational

ವಿಜಯ್‌ ವರ್ಮಾ ಜೊತೆ ಡೇಟಿಂಗ್‌ ಮಾಡುತ್ತಿರುವುದು ನಿಜ; ಒಪ್ಪಿಕೊಂಡ ನಟಿ ತಮನ್ನಾ

ಮುಂಬೈ; ಬಾಲಿವುಡ್‌ ನಟ ವಿಜಯ್‌ ವರ್ಮಾ ಅವರ ಜೊತೆ ಡೇಟಿಂಗ್‌ನಲ್ಲಿರುವುದು ನಿಜ ಎಂದು ನಟಿ ತಮನ್ನಾ ಒಪ್ಪಿಕೊಂಡಿದ್ದಾರೆ. ತಮನ್ನಾ ಹಾಗೂ ವಿಜಯ್‌ ವರ್ಮಾ ಅವರಿದ್ದ ಫೋಟೋಗಳು, ಇಬ್ಬರೂ ಕಿಸ್‌ ಮಾಡುತ್ತಿದ್ದ ವಿಡಿಯೋಗಳು ಹರಿದಾಡಿದ್ದವು. ಆದ್ರೆ ಆಗೆಲ್ಲಾ, ತಮನ್ನಾ ಇದೆಲ್ಲಾ ಸುಳ್ಳು ಎಂದು ಹೇಳಿದ್ದರು. ನಾವಿಬ್ಬರೂ ಒಟ್ಟಿಗೆ ಸಿನಿಮಾ ಮಾಡುತ್ತಿದ್ದೇವೆ. ಹೀಗಾಗಿ ಗಾಸಿಪ್‌ ಹಬ್ಬಿಸಲಾಗಿದೆ ಅಂತ ತಮನ್ನಾ ಹೇಳಿದ್ದರು. ಆದ್ರೆ ಇದೀಗ ಅವ್ರು ಡೇಟಿಂಗ್‌ ಮಾಡುತ್ತಿರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ.

ಲಸ್ಟ್‌ ಸ್ಟೋರಿ-೨ ಸಿನಿಮಾದಲ್ಲಿ ಇಬ್ಬರೂ ನಟನೆ ಮಾಡುತ್ತಿದ್ದಾರೆ. ಈ ವೇಳೆಯೇ ಇಬ್ಬರ ಪರಿಚಯವಾಗಿ ಸ್ನೇಹಕ್ಕೆ ತಿರುಗಿದೆ. ಅನಂತರ ಇಬ್ಬರೂ ಪರಸ್ಪರ ಪ್ರೀತಿಸಲಾರಂಭಿಸಿದ್ದಾರೆ ಎಂದು ತಿಳಿದುಬಂದಿದೆ.

Share Post