ಒಮಿಕ್ರಾನ್ ಜೊತೆ ಬರುತ್ತಿದೆ IHU ರೂಪಾಂತರಿ ತಳಿ..!
ನವದೆಹಲಿ: ಪ್ರಪಂಚದಾದ್ಯಂತ ಒಮಿಕ್ರಾನ್ ಸೋಂಕು ಬಾಧಿಸುತ್ತಿದೆ. ಎಲ್ಲೆಡೆ ಇದರ ಬಗ್ಗೆ ಭೀತಿ ಶುರುವಾಗಿದೆ. ಈ ಬೆನ್ನಲ್ಲೇ ಮತ್ತೊಂದು ಕೊರೊನಾ ರೂಪಾಂತರಿ ತಳಿ ಪತ್ತೆಯಾಗಿದೆ, ಫ್ರಾನ್ಸ್‌ನಲ್ಲಿ IHU ರೂಪಾಂತರಿ ತಳಿ ಪತ್ತೆಯಾಗಿದ್ದು, ಜನರ ಭೀತಿಯನ್ನು ಮತ್ತಷ್ಟು ಹೆಚ್ಚಿಸಿದೆ.
ಫ್ರಾನ್ಸ್‌ನಲ್ಲಿ B.1.640.2 ಎಂಬ ಹೊಸ ಕೊರೊನಾ ತಳಿ ಪತ್ತೆಯಾಗಿದೆ. ಇದಕ್ಕೆ IHU ಎಂದು ಹೆಸರಿಡಲಾಗಿದೆ. ಫ್ರಾನ್ಸ್‌ನಲ್ಲಿ ಇದುವರೆಗೆ 12 ಮಂದಿಯಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಆಫ್ರಿಕಾದ ಕೆಮರೂನ್‌ಗೆ ಹೋಗಿದ್ದವರಲ್ಲಿ ಈ ಹೊಸ ಸೋಂಕು ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಈ IHUನಲ್ಲಿಯೇ ಸುಮಾರು 46 ರೂಪಾಂತರಿಗಳಿವೆ ಎಂದು ತಜ್ಞರು ಹೇಳಿದ್ದಾರೆ.