CinemaHealth

ಮಾನಸಿಕ ಆರೋಗ್ಯ; ಕನ್ನಡದ ಸಂವಾದ ಮಾಡಿದ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ

ಬೆಂಗಳೂರು; ಮಾನಸಿಕ ಆರೋಗ್ಯ ಹಾಗೂ ಚಿಕಿತ್ಸೆ ಕುರಿತು ಜನರಲ್ಲಿರುವ ಅನುಮಾನಗಳನ್ನು ಹೋಗಲಾಡಿಸಲು ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಹಾಗೂ ಇದಕ್ಕೆ ಚಿಕಿತ್ಸೆ ಪಡೆದುಕೊಳ್ಳುವ ಬಗ್ಗೆ ದೀಪಿಕಾ ಪಡುಕೋಣೆ ಜನರೊಂದಿಗೆ ಕನ್ನಡದಲ್ಲಿ ಮಾತನಾಡಿದ್ದಾರೆ. ಈ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ.

ನಾನೂ ಕೂಡಾ ಮಾನಸಿಕ ಒತ್ತಡದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆದಿದ್ದೆ. ಆದ್ರೆ ಕೆಲದಿನಗಳ ಔಷಧಿಗಳನ್ನು ಮುಟ್ಟೇ ಇರಲಿಲ್ಲ. ಆದ್ರೆ ನಾನು ಎಲ್ಲಾ ಅನುಮಾನಗಳನ್ನು ದೂರ ಮಾಡಿಕೊಂಡು, ಔಷಧಿಗಳನ್ನು ತೆಗೆದುಕೊಂಡೆ. ಹೀಗಾಗಿ ಯಾರೂ ಕೂಡಾ ಈ ಬಗ್ಗೆ ಕೀಳರಿಮೆಪಡುವ ಅಗತ್ಯವಿಲ್ಲ. ಎಲ್ಲಾ ರೋಗಗಳಂತೆ ಇದನ್ನೂ ಗುಣಪಡಿಸಿಕೊಳ್ಳಬಹುದು ಎಂದು ದೀಪಿಕಾ ಪಡುಕೋಣೆ ಜಾಗೃತಿ ಮೂಡಿಸಿದ್ದಾರೆ. ಅದೂ ಕೂಡಾ ಅವರು ಕನ್ನಡದಲ್ಲಿ ಮಾತನಾಡಿದ್ದಾರೆ.

    ಮಾನಸಿಕ ಸಮಸ್ಯೆಗಳು ಯಾರಿಗಾದರೂ ಬರಬಹುದು.  ಇಂತಹ ಸಂದರ್ಭದಲ್ಲಿ ಸಹಾಯಕ್ಕಾಗಿ ತಜ್ಞರನ್ನು ಸಂಪರ್ಕಿಸಲು ಯಾವುದೇ ಹಿಂಜರಿಕೆ ಇರಬಾರದು. ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿಯ ಅಗತ್ಯವಿದೆ ಎಂದು ದೀಪಿಕಾ ಅಭಿಪ್ರಾಯಪಟ್ಟಿದ್ದಾರೆ. ಇಂದಿನ ದಿನಗಳಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಮುಕ್ತ ಚರ್ಚೆ ನಡೆಯಬೇಕು ಮತ್ತು ಈ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

    ದೀಪಿಕಾ ಪಡುಕೋಣೆ ಪ್ರಕಾರ, ಈಗ ಜನರು ಮಾನಸಿಕ ಆರೋಗ್ಯದ ಬಗ್ಗೆ ಮುಕ್ತವಾಗಿ ಮಾತನಾಡಲು ಪ್ರಾರಂಭಿಸಿದ್ದಾರೆ. ಈಗ ಇದನ್ನು ಮೊದಲಿನಂತೆ ಕಳಂಕ ಎಂದು ಪರಿಗಣಿಸದೆ ಈ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

 

Share Post