Cinema

ಮೇಘನಾ ಮನೆಯಲ್ಲಿ ಕ್ರಿಸ್‌ಮಸ್‌, ಝಗಮಗಿಸುತ್ತಿರುವ ಲೈಟಿಂಗ್ಸ್

ಬೆಂಗಳೂರು: ಇನ್ನೇನು ಕ್ರಿಸ್‌ಮಸ್‌ ದಿನ ಹತ್ತಿರ ಬರುತ್ತಿದೆ. ಈಗಾಗಲೇ ಬೆಂಗಳೂರು ಜನರು ಆಚರಣೆಗೆ ಸಜ್ಜಾಗಿದ್ದಾರೆ. ಇದೀಗ ಸ್ಯಾಂಡಲ್‌ ವುಡ್‌ ನಟಿ ಮೇಘನಾ ರಾಜ್ ಮನೆಯಲ್ಲಿ ಭರ್ಜರಿ ತಯಾರಿ ನಡೆಸಲಾಗುತ್ತಿದೆ. ಪ್ರೀತಿಯ ಮಗನೊಂದಿಗೆ ಮೊದಲ ವರ್ಷ ಆಚರಣೆ ಮಾಡಿಕೊಳ್ಳುತ್ತಿದ್ದಾರೆ, ಸದ್ಯ ಮಗನೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.ಮೇಘನಾ ರಾಜ್ ಅವರ ತಂದೆ ಸುಂದರ್ ರಾಜ್ ಹಿಂದೂ ಆಗಿದ್ದು, ಅವರ ತಾಯಿ ಪ್ರಮೀಳಾ ಜೋಷಾಯಿ ಕ್ರಿಶ್ಚಿಯನ್ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಾಗಿ ಮೇಘನಾ ಮನೆಯಲ್ಲಿ ಯಾವುದೇ ಹಿಂದೂ ಹಾಗೂ ಕ್ರಿಶ್ಚಿಯನ್ ಹಬ್ಬಗಳು ಬಂದಾಗ ಎರಡು ಹಬ್ಬವನ್ನು ಸಮನಾಗಿ ಬಹಳ ಸಂಭ್ರಮದಿಂದ ಆಚರಿಸುತ್ತಾರೆ. ಈ ಫೋಟೋದಲ್ಲಿ ಲೈಟ್ ಹಾಗೂ ಸ್ಟಾರ್ಸ್‍ಗಳಿಂದ ಅಲಂಕಾರಗೊಳಿಸಲಾಗಿರುವ ಮನೆಯ ಮಧ್ಯ ಭಾಗದಲ್ಲಿ ಮೇಘನಾ ರಾಯನ್‍ನ್ನು ಎತ್ತಿಕೊಂಡಿದ್ದಾರೆ. ಫೋಟೋದಲ್ಲಿ ರಾಯನ್ ಮಂಕಿ ಕ್ಯಾಪ್ ಧರಿಸಿ ಕಲರ್ ಫುಲ್ ಆಗಿರುವ ಲೈಟಿಂಗ್ಸ್‍ನನ್ನೇ ಅಚ್ಚರಿಯಿಂದ ನೋಡುತ್ತಿರುವುದನ್ನು ಕಾಣಬಹುದಾಗಿದೆ. ಈ ಫೋಟೋ ಜೊತೆಗೆ ಲವ್, ಲೈಫ್ ಮತ್ತು ಅದ್ಭುತವಾದ ಕ್ರಿಸ್‍ಮಸ್ ತಿಂಗಳು ಎಂದು ಕ್ಯಾಪ್ಷನ್‍ ಕೂಡ ಹಾಕಿಕೊಂಡಿದ್ದಾರೆ.

Share Post