Sports

ವಿರಾಟ್‌ ಕೊಹ್ಲಿ ಗೆ ರಾಹುಲ್‌ ದ್ರಾವಿಡ್‌ ಮಾರ್ಗದರ್ಶನ

ಸೆಂಚೂರಿಯನ್‌ : ದ.ಆಫ್ರಿಕಾ ಪ್ರವಾಸ ಕೈಗೊಂಡಿರುವ ಟೀಮ್‌ ಇಂಡಿಯಾದ ಮೊದಲ ಟೆಸ್ಟ್‌ ಪಂದ್ಯ ಬಾಕ್ಸಿಂಗ್‌ ಡೇ ದಿನ ಆರಂಭವಾಗಲಿದೆ. ಇದೇ ೨೬ಕ್ಕೆ ಮೊದಲ ಟೆಸ್ಟ್‌ ನಡೆಯುವ ಕಾರಣ ಕಠಿಣ ಅಭ್ಯಾಸದಲ್ಲಿ ತಂಡ ನಿರತವಾಗಿದೆ. ಅಭ್ಯಾಸ ಆರಂಭಿಸಿದ ವಿರಾಟ್‌ ಕೊಹ್ಲಿ

ರಾಹುಲ್‌ ದ್ರಾವಿಡ್‌ ಅವರ ಮಾರ್ಗದರ್ಶನಲ್ಲಿ ಸಾಗುತ್ತಿರುವ ಈ ಪಂದ್ಯಗಳು ತುಂಬಾ ಮಹತ್ವ ಪಡೆದಿದೆ. ವಿರಾಟ್‌ ಕೊಹ್ಲಿಗೆ ಬ್ಯಾಟಿಂಗ್‌ ಟಿಪ್ಸ್‌ ನೀಡುತ್ತಿರುವ ರಾಹುಲ್‌ ದ್ರಾವಿಡ್‌ ಅವರ ಫೋಟೋವನ್ನು ಬಿಸಿಸಿಐ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದೆ.

೨೦೧೯ರಲ್ಲಿ ಕೊನೆಯ ಶತಕ ಸಿಡಿಸಿದ್ದ ಕೊಹ್ಲಿಯವರಿಂದ ತುಂಬಾ ನಿರೀಕ್ಷೆಗಳಿವೆ. ಕಳೆದ ೧೩ ಟೆಸ್ಟ್‌ ಪಂದ್ಯಗಳಲ್ಲಿ ಕೇವಲ ೨೬ರ ಸರಾಸರಿಯಲ್ಲಿ ಕೊಹ್ಲಿ ರನ್‌ ಗಳಿಸಿದ್ದಾರೆ. ದ. ಆಫ್ರಿಕಾದಲ್ಲಿ ಅವರ ಶತಕದ ದಾಹವನ್ನು ನೀಗಿಸಿಕೊಳ್ಳುವ ತವಕದಲ್ಲಿದ್ದಾರೆ.

ಓಮಿಕ್ರಾನ್‌ ಆತಂಕ – ಬ್ಯಾನ್‌ ಆಯ್ತು ದ.ಆಫ್ರಿಕಾದ ಸೂಪರ್‌ ಲೀಗ್

 

Share Post