Cinema

ಒಟಿಟಿ ಕದ ತಟ್ಟಿದ ‘ಮದಗಜ’ – ಅಮೆಜಾನ್‌ನಲ್ಲಿ ಲಭ್ಯ

ಬೆಂಗಳೂರು : ಡಿಸೆಂಬರ್‌ ೩ ನೇ ತಾರೀಖು ತೆರೆಕಂಡಿದ್ದ ಮದಗಜ ಸಿನಿಮಾ ಅದ್ಭುತವಾದ ಓಪನಿಂಗ್‌ ಪಡೆದುಕೊಂಡಿತ್ತು. ಆದರೆ ೨೫ ದಿನ ಪೂರೈಸುವ ಮುನ್ನವೇ ಒಟಿಟಿಯಲ್ಲಿ ಸಿನಿಮಾ ಬಿತ್ತರವಾಗುತ್ತಿದೆ. ಅಮೇಜಾನ್‌ ಪ್ರೈಮ್‌ ಒಟಿಟಿಯಲ್ಲಿ ನೀವು  ಈ ಸಿನಿಮಾ ನೋಡಬಹುದಾಗಿದೆ.

ಒಟಿಟಿ ಪ್ಲಾಟ್‌ಫಾರ್ಮ್‌ ಭಾರತದಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ಕೋವಿಡ್‌ ಎಂದರೂ ತಪ್ಪಿಲ್ಲ. ಕೊರೊನಾ ಮುಂಚೆ ಒಟಿಟಿ ಬಳಕೆದಾರರು ಅಷ್ಟೇನು ಸಕ್ರಿಯರಾಗಿರಲಿಲ್ಲ. ಆದರೆ ಈಗ ಎಷ್ಟೋ ಸಿನಿಮಾಗಳು ಒಟಿಟಿಯಲ್ಲಿಯೇ ರಿಲೀಸ್‌ ಆಗುವಷ್ಟು ಪ್ರಾಬಲ್ಯ ಸಾಧಿಸಿವೆ.

ಶ್ರೀಮುರುಳಿ ಮತ್ತು ಆಶಿಕಾ ರಂಗನಾಥ್‌ ನಟನೆಯ ಮದಗಜ ಸಿನಿಮಾ ಕೂಡ ಈಗ ಒಟಿಟಿ ಕದ ತಟ್ಟಿದೆ. ನಿರ್ಮಾಪಕ ಉಮಾಪತಿ ಅವರು ಹೇಳಿದಂತೆ ಸಿನಿಮಾ ಉತ್ತಮ ಕಲೆಕ್ಷನ್‌ ಗಳಿಸಿದೆ.

Share Post