National

ಮುಂಬೈ ಮಂದಿಗಿಲ್ಲ ಹೊಸ ವರ್ಷಾಚರಣೆ: ಬಿಎಂಸಿ ಸೂಚನೆ

ಮುಂಬೈ: ಕೊರೊನಾ ಹಾಗೂ ಓಮಿಕ್ರಾನ್‌ ವೈರಸ್‌ ಆತಂಕದ ಹಿನ್ನೆಲೆಯಲ್ಲಿ ಹೊಸ ವರ್ಷಕ್ಕೆ ಬಿಎಂಸಿ ಬ್ರೇಕ್‌ ಹಾಕಿದೆ. ಇಂದಿನಿಂದ(ಡಿಸೆಂಬರ್‌ 25) ರ ಮಧ್ಯರಾತ್ರಿಯಿಂದ ಮುಂದಿನ ಆದೇಶ ಜಾರಿಯಾಗುವವರೆಗೆ ಈ ನಿರ್ದೇಶನ ಜಾರಿಯಲ್ಲಿರುತ್ತದೆ. ಇಂದಿನಿಂದ ಹೊರಾಂಗಣ ಅಥವಾ ಒಳಾಂಗಣ ಎಲ್ಲಿಯೂ ಸಂಭ್ರಮಾಚರಣೆ ನಡೆಸದಂತೆ ಮುಂಬೈ ಮಹಾನಗರ ಪಾಲಿಕೆ ನಿಷೇಧ ಹೇರಿದೆ.

ಈ ಕಾನೂನು ಹೊಸ ವರ್ಷ ಆಚರಣೆ ನಡೆಸುವ ಹೊಟೇಲ್‌, ಪಬ್‌, ರೆಸ್ಟೋರೆಂಟ್‌ ಎಲ್ಲಸಕ್ಕೂ ಅನ್ವಯ ಆಗಲಿದೆ. ಕೊರೊನಾ ಸ್ವಲ್ಪ ಇಳಿಕೆಯಾಗಿದೆ ಸೆಲಬ್ರೇಷನ್‌ ಮಾಡಿಕೊಳ್ಳಬಹುದು ಎಂಬ ಮುಂಬೈ ಮಂದಿ ಕನಸು ಕಮರಿದೆ. ಯಾವುದೇ ಕಾರಣಕ್ಕೂ ಸಂಭ್ರಮಾಚರನೆ ಮಾಡದಂತೆ ಬಿಎಂಸಿ ತಾಕೀತು ಮಾಡಿದೆ. ಇದೆ ಜೊತೆಗೆ ಮಹಾರಾಷ್ಟ್ರ ಸರ್ಕಾರ ಕೂಡ ರಾತ್ರಿ 9ರಿಂದ ಬೆಳಗ್ಗೆ 6ರವರೆಗೆ ಐದು ಮಂದು ಅಥವಾ ಅದಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ ಎಂದು ಹೊಸ ಮಾರ್ಗಸೂಚಿ ಹೊರಡಿಸಿದೆ.

Share Post