CinemaCrime

ತಡರಾತ್ರಿಯಲ್ಲಿ ನಟಿ ಪಾಯಲ್‌ ಮೇಲೆ ದಾಳಿ!; ಅಲ್ಲಿ ನಡೆದಿದ್ದಾದರೂ ಏನು..?

ಕೋಲ್ಕತ್ತಾ; ಬೆಂಗಳೂರಿನಲ್ಲಿ ಇತ್ತೀಚೆಗೆ ರೋಡ್‌ ರೇಜ್‌ ಪ್ರಕರಣಗಳು ಹೆಚ್ಚಾಗಿದ್ದವು.. ಇದೀಗ ಇತರೆ ನಗರಗಳಲ್ಲೂ ಇವು ಹೆಚ್ಚಾಗುತ್ತಿವೆ.. ಕೋಲ್ಕತ್ತಾದಲ್ಲಿ ನಟಿ ಪಾಯಲ್‌ ಮುಖರ್ಜಿ ಮೇಲೂ ದಾಳಿಯಾಗಿದೆ.. ತಡರಾತ್ರಿಯಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಆಕೆ ಮೇಲೆ ದುಷ್ಕರ್ಮಿಯೊಬ್ಬ ಹಲ್ಲೆ ಮಾಡಿದ್ದಾನೆ..

ಇದನ್ನೂ ಓದಿ; ಬಸ್‌ ಪ್ರಯಾಣ ದರ ಏರಿಕೆಯ ಸುಳಿವು ಕೊಟ್ರಾ ಸಾರಿಗೆ ಸಚಿವರು..?

ಕೋಲ್ಕತ್ತಾದ ಸದರ್ನ್‌ ಅವೆನ್ಯೂ ಪ್ರದೇಶದಲ್ಲಿ ನಟಿ ಪಾಯಲ್‌ ಮುಖರ್ಜಿ ಶುಕ್ರವಾರ ರಾತ್ರಿ ಕಾರಿನಲ್ಲಿ ಹೋಗುತ್ತಿದ್ದರು.. ಈ ವೇಳೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಕಾರು ಅಡ್ಡಹಾಕಿದ್ದಾರೆ.. ಕಾರಿನ ಗಾಜು ಒಡೆದು ದಾಳಿ ಮಾಡಿದ್ದಾರೆ.. ನಟಿ ಇದರ ವಿಡಿಯೋ ರೆಕಾರ್ಡ್‌ ಮಾಡಿಕೊಂಡು ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದಾರೆ.. ದಾಳಿಯಿಂದ ಡ್ಯಾಮೇಜ್‌ ಆಗಿರುವ ಕಾರಿನ ದೃಶ್ಯಗಳನ್ನು ನಟಿ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.. ದುಷ್ಕರ್ಮಿಗಳ ಈ ಮೃಗೀಯ ವರ್ತನೆಗೆ ಎಲ್ಲೆಡೆ ಆಕ್ರೋಶಗಳು ವ್ಯಕ್ತವಾಗುತ್ತಿವೆ..

ಇದನ್ನೂ ಓದಿ; ನಿವೃತ್ತಿ ಘೋಷಣೆ ಮಾಡಿದ ಟೀಂ ಇಂಡಿಯಾ ಆಟಗಾರ ಶಿಖರ್‌ ಧವನ್‌!

Share Post