BengaluruCrime

ಸಿದ್ದರಾಮಯ್ಯ ವಿರುದ್ಧ FIR ಆಗುತ್ತೆ!; ಬಂಧಿಸುವ ಸಾಧ್ಯತೆ ಇದೆಯಾ..?

ಬೆಂಗಳೂರು; ಖಾಸಗಿ ದೂರುಗಳನ್ನಾಧರಿಸಿ ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಮೈಸೂರು ಲೋಕಾಯುಕ್ತಕ್ಕೆ ಆದೇಶ ನೀಡಿದೆ.. ಸಿಆರ್‌ಪಿಸಿ ಸೆಕ್ಸನ್‌ 156(3) ಅಡಿಯಲ್ಲಿ ತನಿಖೆಗೆ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ನೀಡಿದ್ದು, ಮೂರು ತಿಂಗಳಲ್ಲಿ ವರದಿ ನೀಡಲು ಸೂಚಿಸಲಾಗಿದೆ..
ಎಫ್‌ಐಆರ್‌ ದಾಖಲಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆ ಮಾಡುವ ಅಧಿಕಾರ ತನಿಖಾಧಿಕಾರಿಗೆ ಇರುತ್ತದೆ.. ಹೀಗಾಗಿ ನಾಳೆಯೊಳಗೆ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್‌ ದಾಖಲಾಗಲಿದೆ..ಅನಂತರ ತನಿಖೆ ಮುಂದುವರೆಯಲಿದೆ.. ಅಗತ್ಯಬಿದ್ದರೆ ಸಿಎಂ ಸಿದ್ದರಾಮಯ್ಯ ಅವರನ್ನು ಬಂಧಿಸಿ ವಿಚಾರಣೆ ನಡೆಸುವ ಅಧಿಕಾರ ತನಿಖಾಧಿಕಾರಿಗೆ ಇರುತ್ತದೆ..

ಎಫ್‌ಐಅರ್‌ ದಾಖಲಾದ ಮೇಲೆ ಸಿದ್ದರಾಮಯ್ಯ ಅವರ ಕರೆದು ವಿಚಾರಣೆ ನಡೆಸಲಾಗುತ್ತದೆ.. ಈ ವೇಳೆ ಅವರ ತಪ್ಪಿರುವುದು ಮೇಲ್ನೋಟಕ್ಕೆ ಕಂಡುಬಂದರೆ ಬಂಧಿಸಿ ವಿಚಾರಣೆ ನಡೆಸುವ ಸಾಧ್ಯತೆ ಇರುತ್ತದೆ.. ಹೀಗಾಗಿ ತನಿಖಾಧಿಕಾರಿ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಸಿದ್ದರಾಮಯ್ಯ ಅವರನ್ನು ಬಂಧಿಸಬೇಕೇ, ಬಂಧಿಸಬಾರದೇ ಎಂಬುದರ ತೀರ್ಮಾನ ಆಗಲಿದೆ..

ಲೋಕಾಯುಕ್ತ ಸಂಸ್ಥೆ ರಾಜ್ಯ ಸರ್ಕಾರದ ಅಡಿಯಲ್ಲಿರುವ ತನಿಖಾ ಸಂಸ್ಥೆಯಾಗಿದೆ.. ಹೀಗಾಗಿ ಸಿಎಂ ಸಿದ್ದರಾಮಯ್ಯ ಅಧಿಕಾರದಲ್ಲಿದ್ದರೆ ತನಿಖೆ ಸರಿಯಾಗಿ ನಡೆಯುವುದಿಲ್ಲ.. ಹೀಗಾಗಿ ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕೆಂದು ಅರ್ಜಿದಾರರು ಹಾಗೂ ವಿಪಕ್ಷಗಳು ಆಗ್ರಹ ಮಾಡುತ್ತಿವೆ..

Share Post