Cinema

ಹೌದಾ…ನಿಜಕ್ಕೂ ಉಪ್ಪೆನ ಬೆಡಗಿ ಶೂಟಿಂಗ್‌ ಸೆಟ್‌ಗೆ ತಡವಾಗಿ ಬರ್ತಾರಾ..?-ವದಂತಿಗೆ ಕೃತಿ ಹೇಳೋದೇನು..?

ಹೈದರಾಬಾದ್:‌ ಕೊಡಗು ಮೂಲದ ಕೃತಿ ಶೆಟ್ಟಿ ಟಾಲಿವುಡ್‌ನಲ್ಲಿ ಬಹಳ ಹೆಸರು ಮಾಡಿದ್ದಾರೆ. ಉಪ್ಪೆನ ಸಿನಿಮಾ ಮೂಲಕ ತೆಲುಗಿಗೆ ಎಂಟ್ರಿ ಕೊಟ್ಟ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಕೃತಿ ಶೆಟ್ಟಿ ಬ್ಯುಸಿಯಾಗಿದ್ದಾರೆ. ಒಳ್ಳೆಯ ಹೆಸರು, ಒಳ್ಳೆಯ ಸಿನಿಮಾಗಳು ಕೈಗೆ ಬರುತ್ತಿದ್ದಂತೆ ವದಂತಿಗಳು ಕೂಡ ಹಿಂದೆಯೇ ಸಾಲು ಸಾಲಾಗಿ ಬರುತ್ತವೆ. ಅವು ಸೆಲೆಬ್ರೆಟಿಗಳನ್ನು ಯಾರನ್ನೂ ಬಿಡುವುದಿಲ್ಲ ಅವರ ಸಾಲಿಗೆ ಈಗ ಕೃತಿ ಶೆಟ್ಟಿ ಕೂಡ ಸೇರಿದ್ದಾರೆ.

ಏನಪ್ಪಾ ಅಂದ್ರೆ ಶೂಟಿಂಗ್‌ ಸೆಟ್‌ಗೆ ಕೃತಿ ಶೆಟ್ಟಿ ಸದಾ ತಡವಾಗಿ ಬರುತ್ತಾರೆಂಬ ಗಂಭೀರ ಆರೋಪ ಕೇಳಿಬರುತ್ತಿದೆ. ಸಿನಿಮಾ ಇಂಟರ್ವ್ಯೂ ಕಾರ್ಯಕ್ರಮವೊಂದರಲ್ಲಿ ಕೂಡ ಈ ಬಗ್ಗೆ ಮಾತನಾಡಿದ್ರು ಎನ್ನಲಾಗಿದೆ. ಈಗ ಈ ವದಂತಿ ನಟಿಯ ನಿದ್ದೆಗೆಡಿಸಿದೆ. ಇದನ್ನು ಹೀಗೆ ಬಿಟ್ರೆ ತನ್ನ ವೃತ್ತಿ ಜೀವನಕ್ಕೆ ತೊಂದರೆ ಆಗುವುದು ಖಚಿತ ಎಂದು ಅವರು ತಿಳಿಸಿದ್ದಾರೆ.

ಈ ಬಗ್ಗೆ ನಟಿ ತಮ್ಮ ಪಿಆರ್‌ ತಂಡದವರಿಗೆ ಸ್ಪಷ್ಟನೆ ನೀಡುವಂತೆ ಸೂಚನೆ ಕೊಟ್ಟಿದ್ದಾರಂತೆ. ಅದಕ್ಕವರು ನಟ/ನಟಿ ಅಂದ ಮೇಲೆ ಇದೆಲ್ಲಾ ಇದ್ದದ್ದೆ ತಲೆಕೆಡಿಸಿಕೊಳ್ಳದಂತೆ ಸೂಚಿಸಿದ್ದಾರಂತೆ. ಆದರೆ ಇದನ್ನು ಕೃತಿ ಇದು ನನ್ನ ಭವಿಷ್ಯದ ಪ್ರಶ್ನೆ ಈ ರೀತಿ ಸುಳ್ಳು ಸುದ್ದಿ ಹಬ್ಬುವುದರಿಂದ ನಾಳೆ ದಿನ ನನಗೆ ಅವಕಾಶಗಳು ಸಿಗದೆ ಇರಬಹುದು. ನಿರ್ದೇಶಕರು ನನ್ನ ಜೊತೆ ಸಿನಿಮಾ ಮಾಡದೆ ಇರಬಹುದು ಎಂಬುದನ್ನು ಅರಿತು ಈ ವದಂತಿ ಬಗ್ಗೆ ಗಂಭಿರವಾದ ನಿರ್ಣಯ ಕೈಗೊಳ್ಳಲು ಚಿಂತನೆ ನಡೆಸಿದ್ದಾರಂತೆ.

Share Post