ತಮಿಳಿನ ಖ್ಯಾತ ನಟ ವಿಜಯ್ ಆ್ಯಂಟನಿ ಮಗಳು ಆತ್ಮಹತ್ಯೆ
ಚೆನ್ನೈ; ಕಾಲಿವುಡ್ನ ಖ್ಯಾತ ನಟ ವಿಜಯ್ ಆ್ಯಂಟನಿ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇಂದು ಮುಂಜಾನೆ ಚೆನ್ನೈನ ಮನೆಯಲ್ಲಿ ವಿಜಯ್ ಮಗಳ ಮೀರಾ ನೇಣು ಬಿಗಿದುಕೊಂಡಿದ್ದು, ಕೂಡಲೇ ಕೆಳಗಿಳಿಸಿ, ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಯಾವುದೇ ಪ್ರಯೋಜನವಾಗಿಲ್ಲ.
ಹದಿನಾರು ವರ್ಷದ ಮೀರಾ ಚೆನ್ನೈನ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಳು. ಹಲವು ದಿನಗಳಿಂದ ಮೀರಾ ಖಿನ್ನತೆಗೆ ಒಳಗಾಗಿದ್ದಳು. ಖಿನ್ನತೆಯಿಂದಾಗಿಯೇ ಮೀರಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಇದಕ್ಕೆ ಬೇರೆ ಕಾರಣ ಇರಬಹುದೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.
ನಟ ವಿಜಯ್ ಅವರು ಫಾತಿಮಾ ಅವರನ್ನು ಮದುವೆಯಾಗಿದ್ದರು. ಇವರಿಗೆ ಮೀರಾ ಹಾಗೂ ಲಾರಾ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದರು. ಇದರಲ್ಲಿ ಮೀರಾ ಆತ್ಮಹತ್ಯೆಗೆ ಶರಣಾಗಿದ್ದಾಳೆ.