Cinema

KGF ‌2 ಜೊತೆ ಪೈಪೋಟಿಗೆ ಇಳಿಯಲಿದ್ದಾನೆ ಬೀಸ್ಟ್

ಬೆಂಗಳೂರು : KGF 2 ಕನ್ನಡದವರ ಸಿನಿಮಾ ಅನ್ನೋದಕ್ಕಿಂತ ಪ್ಯಾನ್‌ ಇಂಡಿಯಾ ಸಿನಿಮಾ ಅನ್ನಬಹುದು. KGF 2 ಸಿನಿಮಾ ಬಿಡುಗಡೆಗಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. 14 ಏಪ್ರಿಲ್‌ ನಲ್ಲಿ ಸಿನಿಮಾ ತೆರೆಗೆ ಬರಲು ಸಿದ್ಧತೆ ನಡೆಸಿದೆ. ಈಗ ತಮಿಳಿನ ವಿಜಯ್‌ ನಟನೆಯ ಬೀಸ್ಟ್‌ ಸಿನಿಮಾ ಕೂಡ ಏಪ್ರಿಲ್‌ಗೆ ಬರಲಿದೆ ಎಂದು ಘೋಷಿಸಿದ್ದಾರೆ.

KGF2 ಪ್ಯಾನ್‌ ಇಂಡಿಯಾ ಸಿನಿಮಾ ಆಗಿರುವ ಕಾರಣ ತಮಿಳಿನಲ್ಲಿಯೂ ಬಿಡುಗಡೆಯಾಗಲಿದೆ. ಒಂದೊಮ್ಮೆ ಕೆಜಿಎಫ್‌ ಮತ್ತು ಬೀಸ್ಟ್‌ ಎರಡೂ ಒಟ್ಟಿಗೆ ಬಿಡುಗಡೆಗೊಂಡರೆ KGF 2 ಅಬ್ಬರ ಇಳಿಸಬಹುದು ಎಂಬ ಲೆಕ್ಕಾಚಾರ ಇದ್ದರೂ ಇರಬಹುದು ಎಂದು ಗಾಂಧಿನಗರದ ಪಂಡಿತರು ಮಾತನಾಡುತ್ತಿದ್ದಾರೆ.

ಇನ್ನು ತೆಲುಗಿನಲ್ಲಿ ಮಹೇಶ್​ ಬಾಬು ನಟನೆಯ ‘ಸರ್ಕಾರು ವಾರಿ ಪಾಟ’ ಚಿತ್ರ ಕೂಡ ಇದೇ ಸಂದರ್ಭದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಚಿತ್ರ ಯಾವ ಮಟ್ಟಕ್ಕೆ ಹೋಗಲಿದೆ ಏನು ಎಂಬುದನ್ನು ಕಾದು ನೋಡಬೇಕು. ಹೆಚ್ಚುತ್ತಿರುವ ಕೊರೊನಾ ಸೋಂಕಿನಿಂದ ಒಂದು ವೇಳೆ ಲಾಕ್‌ಡೌನ್‌ ಆದರೆ ಎಲ್ಲಾ ಪ್ಲಾನ್‌ ತಲೆಕೆಳಗಾಗಬಹುದು.

Share Post