ಗಲಾಟೆ ವೇಳೆ ನನ್ನ ಖಾಸಗಿ ಭಾಗಗಳನ್ನು ಸ್ಪರ್ಶಿಸಿದ್ದಾರೆ: ನಟಿ ಸಪ್ನಾ ಗಿಲ್
ಮುಂಬೈ: ಭಾರತ ಕ್ರಿಕೆಟ್ ತಂಡದ ಆಟಗಾರ ಪೃಥ್ವಿ ಶಾ ಮೇಲೆ ಹಲ್ಲೆ ಪ್ರಕರಣವನ್ನು ನಟಿ ಹಾಗೂ ಡಿಜಿಟಲ್ ಕ್ರಿಯೇಟರ್ ಸಪ್ನಾ ಗಿಲ್ ತಳ್ಳಿ ಹಾಕಿದ್ದಾರೆ. ಘಟನಾ ಸ್ಥಳದಲ್ಲಿ ನಾನು ರೀಲ್ಸ್ ಮಾಡುತ್ತಿದ್ದೆವು. ಆಗ ಫೃಥ್ವಿ ಶಾ ಅವರೇ ನಮ್ಮ ಮೇಲೆ ಹಲ್ಲೆ ಮಾಡಿದರು. ಈ ವೇಳೆ ಒಬ್ಬ ಅಥವಾ ಇಬ್ಬರು ನನ್ನ ದೇಹದ ಖಾಸಗಿ ಅಂಗಗಳನ್ನು ಬಲವಾಗಿ ಸ್ಪರ್ಶಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಭಾರತ ಕ್ರಿಕೆಟ್ ತಂಡದ ಆಟಗಾರ ಪೃಥ್ವಿ ಶಾ ಮೇಲೆ ಹಲ್ಲೆ ಹಾಗೂ ಅವರ ಕಾರಿನ ಮೇಲೆ ದಾಳಿ ಮಾಡಿದ ಪ್ರಕರಣ ನಡೆದಿತ್ತು. ಈ ಸಂಬಂಧ ಭೋಜಪುರಿ ನಟಿ ಸಪ್ನಾ ಗಿಲ್ ಹಾಗೂ ಇತರ ಮೂವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ನಿನ್ನೆ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಈ ವೇಳೆ ನಟಿ ಘಟನೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.