ʻಮಾವಯ್ಯʼ ಎಂದು ಸ್ವೀಟಾಗಿ ಟ್ವೀಟ್ ಮಾಡಿದ ಜ್ಯೂ.ಎನ್ಟಿಆರ್
ಹೈದರಾಬಾದ್: ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ನಾರಾ ಚಂದ್ರಬಾಬಯ ನಾಯ್ಡು ಮತ್ತು ಅವರ ಪುತ್ರ ನಾರಾ ಲೋಕೇಶ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ತಾರಕ್ ತುಂಬಾ ಪ್ರೀತಿಯಿಂದ ಟ್ವೀಟ್ ಮಾಡಿರುವುದು ನೆಟ್ಟಿಗರಿಗೆ ಆಶ್ಚರ್ಯವನ್ನುಂಟುಮಾಡಿದೆ.
ನಿನ್ನೆ ಚಂದ್ರಬಾಬು ನಾಯ್ಡು ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಇದಕ್ಕೂ ಮುನ್ನಾದಿನ ಅವರ ಪುತ್ರ ನಾರಾ ಲೋಕೇಶ್ಗೂ ಪಾಸಿಟಿವ್ ಆಗಿ ಹೋಂ ಐಸೋಲೇಟ್ ಆಗಿದ್ದಾರೆ. ಸ್ವಲ್ಪ ಶೀತ, ಕೆಮ್ಮು ಇದ್ದ ಕಾರಣ ಕೊರೊನಾ ಪರೀಕ್ಷೆ ಮಾಡಿಸಿದ್ದಾರೆ. ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದ್ದು ಗುಂಟೂರಿನಲ್ಲಿರುವ ಮನೆಯಲ್ಲಿ ಐಸೋಲೇಟ್ ಆಗಿದ್ದಾರೆ. ಸೋಂಕಿನಿಂದ ಬೇಗ ಗುಣಮುಖರಾಗುವಂತೆ ಸಿನಿ ದಿಗ್ಗಜರು ಹಾಗೂ ರಾಜಕೀಯ ಗಣ್ಯರು ಹಾರೈಸಿದ್ದಾರೆ.
Wishing you Mavayya @ncbn garu and @naralokesh a speedy recovery. Get well soon! https://t.co/cygw7hmARc
— Jr NTR (@tarak9999) January 18, 2022
ಇದೆಲ್ಲಾ ಒಂದು ಕಡೆ ಆದ್ರೆ, ಜ್ಯೂ. ಎನ್ಟಿಆರ್ ಮಾಡಿರುವ ಆ ಒಂದು ಟ್ವೀಟ್ ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದೆ. ʻಮಾವಯ್ಯಾ ನಿಮ್ಮ ಆರೋಗ್ಯ ಬೇಗ ಸುಧಾರಿಸಿಕೊಳ್ಳಲಿ ಎಂದು ಆ ದೇವರಲ್ಲಿ ಪ್ರಾರ್ಥನೆ ಮಾಡುವೆ, ನಾರಾ ಲೋಕೇಶ್ ಅವರ ಆರೋಗ್ಯವೂ ಸರಿಹೋಗಲಿ ಎಂದು ಟ್ವೀಟ್ ಮಾಡಿದ್ದಾರೆ. ಟ್ವೀಟನ್ನು ಸ್ಕ್ರಿನ್ ಸಾಟ್ ತೆಗೆದುಕೊಂಡು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
As Expected Tweet
But Mavayya ????
అన్న గారి కుటుంబం రా
జై బాలయ్య జై రామయ్య
జై చంద్రన్న
జై టీడీపీ
జోహార్ అన్న గారు జోహార్ హరిన్న https://t.co/yJubgJV0fV pic.twitter.com/sOmVZlG0cA— Satish™ 4 Nandamuri (@IsmartSatheesh) January 18, 2022