ನಾಳೆ ಜೇಮ್ಸ್ ಚಿತ್ರದ ಫಸ್ಟ್ ಲುಕ್ ರಿಲೀಸ್
ಬೆಂಗಳೂರು : ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಅಭಿನಯದ ಕೊನೆಯ ಚಿತ್ರವಾದ ಜೇಮ್ಸ್ ತಂಡದಿಂದ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ನಾಳೆ ಗಣ ರಾಜ್ಯೋತ್ಸವದ ಪ್ರಯುಕ್ತ ಸಿನಿಮಾ ತಂಡ ಫರ್ಸ್ಟ್ ಲುಕ್ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.
ಅಪ್ಪು ಅವರ ಅಗಲಿಕೆಯಿಂದ ಸಾಕಷ್ಟು ನೊಂದಿರುವ ಅಭಿಮಾನಿಗಳಿಗೆ ಈ ವಿಷಯ ಕೊಂಚ ಖುಷಿ ಸಿಂಪಡಿಸಲಿದೆ. ಇನ್ನು ಜೇಮ್ಸ್ ಸಿನಿಮಾದಲ್ಲಿ ಶಿವಣ್ಣ ಮತ್ತು ರಾಘಣ್ಣ ನಟಿಸಿರುವುದು ವಿಶೇಷವಾಗಿದೆ. ನಾಳೆ ಬೆಳಗೆ 11.11ಕ್ಕೆ ಸರಿಯಾಗಿ ಸಿನಿಮಾದ ಫರ್ಸ್ಟ್ ಲುಕ್ ಬಿಡುಗಡೆಯಾಗಲಿದೆ.
ಸಿನಿಮಾ ರಿಲೀಸ್ ದಿನಾಂಕವನ್ನು ಕೂಡ ನಾಳೆ ರಿವೀಲ್ ಮಾಡುವ ಸಾಧ್ಯತೆ ಇದೆ ಎಂದು ಊಹಿಸಲಾಗ್ತಿದೆ. ಅಪ್ಪು ಅವರಿಗೆ ಯಾರು ಧ್ವನಿ ನೀಡಲಿದ್ದಾರೆ ಎಂಬ ಮಾಹಿತಿ ಇನ್ನು ಹೊರ ಬಿದ್ದಿಲ್ಲ. ಒಟ್ಟಾರೆ ಚಿತ್ರವನ್ನು ಮಾರ್ಚ್ 17ಕ್ಕೆ ರಿಲೀಸ್ ಮಾಡುವ ಆಸೆಯನ್ನು ತಂಡ ವ್ಯಕ್ತಪಡಿಸಿದೆ.