Cinema

ನಟ ಶ್ರೀಮುರಳಿ ಅಭಿಮಾನಿಗಳಿಗೆ ನಿರಾಸೆ, ಯಾಕೆ ಗೊತ್ತಾ?

ಬೆಂಗಳೂರು: ನಟ ಶ್ರೀಮುರಳಿ ಅವರ ಅಭಿನಯದ ಮದಗಜ ಸಿನಿಮಾ ಯಶಸ್ವಿ ಪ್ರದರ್ಶನ ಕಂಡು ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ. ಮದಗಜನ ಆರ್ಭಟಕ್ಕೆ ಕನ್ನಡದ ಪ್ರೇಕ್ಷಕರು ಮನ ಮೆಚ್ಚಿ ಹಾಡಿ ಹೊಗಳಿದ್ದಾರೆ.ಇದೇ ಖುಷಿಯಲ್ಲಿರುವಾಗಲೇ ಶ್ರೀಮುರಳಿ ತಮ್ಮ ಫ್ಯಾನ್ಸ್‌ಗೆ ಸಂದೇಶವೊಂದನ್ನು ರವಾನೆ ಮಾಡಿದ್ದಾರೆ.ಸ್ಟಾರ್‌ಗಳ ಹುಟ್ಟುಹಬ್ಬ ಅಂದರೆ, ಅಭಿಮಾನಿಗಳು ಒಂದು ವಾರದಿಂದಲೇ ಹಬ್ಬ ವಾತವರಣವಾಗುತ್ತದೆ. ಸೋಶಿಯಲ್ ಮೀಡಿಯಾಗಳಲ್ಲಿ ನಿಧಾನವಾಗಿ ಬರ್ತ್ ಡೇ ಸೆಲೆಬ್ರೆಟ್ ಮಾಡಲು ಆರಂಭಿಸುತ್ತಾರೆ. ಶ್ರೀಮುರಳಿ ಹುಟ್ಟುಹಬ್ಬವನ್ನೂ ಕೂಡ ಅಭಿಮಾನಿಗಳು ಭರ್ಜರಿಯಾಗಿ ಸಂಭ್ರಮಿಸಬೇಕು ಅಂತ ಕಾದು ಕೂತಿದ್ದರು. ಅಷ್ಟರೊಳಗೆ ಸ್ವತ: ಶ್ರೀಮುರಳಿ ಅಭಿಮಾನಿಗಳಿಗೆ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ.ಹೌದು.. ಶ್ರೀಮುರಳಿ ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೆ ಇರಲು ನಿರ್ಧರಿಸಿದ್ದಾರೆ. ಹೀಗಾಗಿ ಒಂದು ದಿನ ಮುಂಚಿತವಾಗಿ ಶ್ರೀಮುರಳಿ ಟ್ವೀಟ್ ಮಾಡಿ, ಅಭಿಮಾನಿಗಳಿಗೆ ಸಂದೇಶ ರವಾನೆ ಮಾಡಿದ್ದಾರೆ. “ನನ್ನ ಪ್ರೀತಿಯ ಅಭಿಮಾನಿಗಳೆ. ಈ ಬಾರಿ ನಿಮ್ಮೊಂದಿಗೆ ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲಾಗುವುದಿಲ್ಲ. ಕಾರಣವೇನೆಂದು ನಿಮಗೆ ಗೊತ್ತಿರುವುದೆಂದು ಭಾವಿಸುವೆ. ನಾನು ಬೆಂಗಳೂರಿನಲ್ಲೂ ಇರುವುದಿಲ್ಲ. ಸದಾ ನಿಮ್ಮ ಪ್ರೀತಿ ಹಾಗು ಆಶೀರ್ವಾದವನ್ನು ಬಯಸುವ.. ನಿಮ್ಮ, ಶ್ರೀಮುರಳಿ (ಅಭಿಮಾನಿಗಳ ಅಭಿಮಾನಿ)” ಎಂದು ಶ್ರೀಮುರಳಿ ಟ್ವೀಟ್ ಮೂಲಕ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

Share Post