Cinema

ಗಂಧದ ಗುಡಿ ಶೂಟಿಂಗ್‌ ಇನ್ನೂ ಬಾಕಿ ಇದೆ !!!

ಬೆಂಗಳೂರು : ಅಪ್ಪು ಅವರ ಅಕಾಲಿಕ ಮರಣದಿಂದಾಗಿ ಸಾಕಷ್ಟು ಕೆಲಸಗಳು ಅರ್ಧಕ್ಕೆ ನಿಂತಿವೆ. ಇನ್ನು ಅವರ ಅಭಿಮಾನಿಗಳು ಗಂಧದ ಗುಡಿ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ ಈ ಸಿನಿಮಾದ ಶೂಟಿಂಗ್‌ ಇನ್ನೂ ಪೂರ್ಣಗೊಂಡಿಲ್ಲ.

ಇನ್ನು ೭-೮ ದಿನಗಳ ಶೂಟಿಂಗ್‌ ಬಾಕಿ ಇತ್ತು, ಇದಕ್ಕೆ ಪುನೀತ್‌ ಅವರು ಡೇಟ್‌ ಕೂಡ ಕೊಟ್ಟಿದ್ದರು. ಈಗ ಅವರ ಅನುಪಸ್ಥಿತಿಯಲ್ಲಿ ಇದನ್ನು ಚಿತ್ರೀಕರಿಸುವಂತಾಗಿದೆ. ಚಿತ್ರದ ನಿರ್ದೇಶಕರು ಅಮೋಘವರ್ಷ ಚಿತ್ರವನ್ನು ಮುಗಿಸಿಕೊಡುವ ಭರವಸೆ ನೀಡಿದ್ದಾರೆ.

ಎಲ್ಲವೂ ಅಂದುಕೊಂಡಂತೆ ಸಾಗಿದರೆ ಮುಂದಿನ ವರ್ಷದಲ್ಲಿ ಚಿತ್ರ ತೆರೆಕಾಣಲಿದೆ

 

Share Post