ನಟಿ ರಾಖಿ ಸಾವಂತ್ ಗೆ ಏನಾಯ್ತು..?; ಆಸ್ಪತ್ರೆಗೆ ದಾಖಲಾದ ನಟಿ!
ಮುಂಬೈ; ಬಾಲಿವುಡ್ ನಟಿ ರಾಖಿ ಸಾವಂತ್ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಿರುತ್ತಾರೆ.. ಇದರಲ್ಲಿ ಬಹುತೇಕವು ನಾಟಕಗಳೇ ಆಗಿರುತ್ತವೆ.. ಹೀಗಾಗಿ ನಿಜವಾಗಿ ಏನಾದರೂ ಆದರೂ ಯಾರೂ ನಂಬೋ ಸ್ಥಿತಿಯಲ್ಲಿಲ್ಲ.. ಈಗ ರಾಖಿ ಸಾವಂತ್ ಆಸ್ಪತ್ರೆಯಲ್ಲಿದ್ದಾರೆ. ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ..
ರಾಖಿ ಸಾವಂತ್ ಅವರು ಗಂಭೀರ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.. ಹೀಗಾಗಿ ಆಕೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.. ರಾಖಿ ಸಾವಂತ್ ಬೆರಳಿಗೆ ಆಕ್ಸಿಮೀಟರ್ ಅಳವಡಿಸಲಾಗಿದೆ..
ರಾಖಿ ಆರೋಗ್ಯದ ಬಗ್ಗೆ ಮಾತನಾಡಿರುವ ಮಾಜಿ ಪತಿ ರಿತೇಶ್, ಶೀಘ್ರದಲ್ಲೇ ರಾಖಿ ಸಾವಂತ್ ಆರೋಗ್ಯದ ಬಗ್ಗೆ ಅಪ್‌ಡೇಟ್ ನೀಡುವುದಾಗಿ ತಿಳಿಸಿದ್ದಾರೆ. ಆದರೆ ಅವರ ಆರೋಗ್ಯದ ಬಗ್ಗೆ ಇನ್ನೂ ಯಾವುದೇ ವರದಿ ಬಂದಿಲ್ಲ.