BengaluruCinemaCrime

ರೇಪ್‌ ಕೇಸ್‌; ಬೆಂಗಳೂರಿನಲ್ಲಿ ಕೊರಿಯೋ ಗ್ರಾಫರ್‌ ಜಾನಿ ಮಾಸ್ಟರ್‌ ಅರೆಸ್ಟ್‌!

ಬೆಂಗಳೂರು; ಜೂನಿಯರ್‌ ಮಹಿಳಾ ಕೊರಿಯೋಗ್ರಾಫರ್‌ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿದ್ದ ದಕ್ಷಿಣ ಭಾರತದ ಖ್ಯಾತ ಸಿನಿಮಾ ಕೊರಿಯೋ ಗ್ರಾಫರ್‌ ಜಾನಿ ಮಾಸ್ಟರ್‌ ಅವರನ್ನು ಬಂಧಿಸಲಾಗಿದೆ.. ಬೆಂಗಳೂರಿನಲ್ಲಿ ಹೈದರಾಬಾದ್‌ನ ಸೈಬರಾಬಾದ್‌ ಪೊಲೀಸರು ಜಾನಿ ಮಾಸ್ಟರ್‌ ಅವರನ್ನು ಬಂಧಿಸಲಾಗಿದೆ..

ಹೈದರಾಬಾದ್‌ ಪೊಲೀಸರು ಈಗ ಜಾನಿ ಮಾಸ್ಟರ್‌ ಅವರನ್ನು ಈಗ ಹೈದರಾಬಾದ್‌ಗೆ ಕರೆದುಕೊಂಡು ಹೋಗಲಾಗುತ್ತಿದ್ದು, ಸಂಜೆ ಅಥವಾ ನಾಳೆ ಕೋರ್ಟ್‌ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ… ಜೂನಿಯರ್‌ ಮಹಿಳಾ ಕೊರಿಯೋಗ್ರಾಫರ್‌ ಅಪ್ರಾಪ್ತಳಾಗಿದ್ದ ಸಂದರ್ಭದಿಂದ ಆಕೆ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ದೂರಿನಲ್ಲಿ ಹೇಳಲಾಗಿದೆ.. ಹೀಗಾಗಿ, ಪೋಕ್ಸೋ ಕಾಯ್ದೆಯಡಿ ಅವರ ಕೇಸ್‌ ದಾಖಲಾಗಿತ್ತು..

ನಾಲ್ಕೈದು ದಿನಗಳ ಹಿಂದೆ ಜಾನಿ ಮಾಸ್ಟರ್‌ ವಿರುದ್ಧ ಕೇಸ್‌ ದಾಖಲಿಸಲಾಗಿತ್ತು.. ನಾಲ್ಕೈದು ತಂಡಗಳನ್ನು ರಚಿಸಿ ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿತ್ತು.. ಹಿಂದಿ ಚಿತ್ರವೊಂದರ ಶೂಟಿಂಗ್‌ಗಾಗಿ ಅವರು ಲಡಾಕ್‌ಗೆ ಹೋಗಿದ್ದಾರೆ ಎಂದು ಹೇಳಲಾಗಿತ್ತು.. ಆದ್ರೆ ಅವರು ಬೆಂಗಳೂರಿಗೆ ಬಂದು ಅಲ್ಲಿಂದ ನೆಲ್ಲೂರಿಗೆ ಹೋಗಲು ಯತ್ನಿಸುತ್ತಿದ್ದರು ಎನ್ನಲಾಗಿದೆ.. ಆದ್ರೆ ಈ ಮಾಹಿತಿ ಅರಿತ ಹೈದರಾಬಾದ್‌ ಪೊಲೀಸರು ಬೆಂಗಳೂರಿನಲ್ಲಿ ಜಾನಿ ಮಾಸ್ಟರ್‌ ಅವರನ್ನು ಬಂಧಿಸಿದ್ದಾರೆ..

ದೂರು ನೀಡಿದ್ದಾಗಿನ ವರದಿ ಹೀಗಿದೆ;

ಹೈದರಾಬಾದ್‌; ತೆಲುಗು ಚಿತ್ರರಂಗದ ಖ್ಯಾತ ಕೊರಿಯೋಗ್ರಾಫರ್‌ ಜಾನಿ ಮಾಸ್ಟರ್‌ ವಿರುದ್ಧ ಲೈಂಗಿ ದೌರ್ಜನ್ಯ ಆರೋಪ ಕೇಳಿಬಂದಿದೆ.. ಕೆಲದಿನಗಳಿಂದ ಕೊರಿಯೋಗ್ರಾಫರ್‌ ಜಾನಿ ಮಾಸ್ಟರ್‌ ನನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು 21 ವರ್ಷದ ಮಹಿಳಾ ಜೂನಿಯರ್‌ ಕೊರಿಯೋಗ್ರಾಫರ್‌ ಆರೋಪ ಮಾಡಿದ್ದಾರೆ.. ಈ ಬಗ್ಗೆ ರಾಯದುರ್ಗಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ..
ಹೈದರಾಬಾದ್‌, ಮುಂಬೈ, ಚೆನ್ನೈ ನಗರದಲ್ಲಿ ಔಟ್‌ಡೋರ್‌ ಶೂಟಿಂಗ್‌ ಸಂದರ್ಭದಲ್ಲಿ ಕೊರಿಯೋಗ್ರಾಫರ್‌ ಜಾನಿ ಮಾಸ್ಟರ್‌ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.. ಇದರ ಜೊತೆಗೆ ನರ್ಸಿಂಗಿಯಲ್ಲಿನ ಅವರ ನಿವಾಸದಲ್ಲೂ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಮಹಿಳಾ ಕೊರಿಯೋಗ್ರಾಫರ್‌ ಆರೋಪ ಮಾಡಿದ್ದಾಋೆ.. ಆಕೆಯ ನೀಡಿದ ದೂರಿನ ಮೇರೆಗೆ ರಾಯದುರ್ಗಂ ಪೊಲೀಸರು ಜೀರೋ ಎಫ್‌ಐಆರ್‌ ದಾಖಲು ಮಾಡಿದ್ದಾರೆ.. ನಂತರ ನರ್ಸಿಂಗ್‌ ಠಾಣೆ ಪೊಲೀಸರಿಗೆ ಕೇಸು ವರ್ಗಾವಣೆ ಮಾಡಲಾಗಿದೆ. ಕೊರಿಯೋಗ್ರಾಫರ್‌ ಜಾನಿ ಮಾಸ್ಟರ್‌ ವಿರುದ್ಧ ಐಪಿಸಿ ಸೆಕ್ಷನ್‌ 376, 506, 323-2 ಅಡಿ ಕೇಸ್‌ ದಾಖಲು ಮಾಡಲಾಗಿದೆ.. ಅತ್ಯಾಚಾರ, ಬೆದರಿಕೆ, ಗಾಯ ಮಾಡಿದ ಆರೋಪದ ಮೇಲೆ ಕೇಸ್‌ ದಾಖಲಾಗಿದೆ..
ದಕ್ಷಿಣ ಭಾರತದಲ್ಲಿ ಟಾಪ್‌ ಕೊರಿಯೋಗ್ರಾಫರ್‌ ಆಗಿರುವ ಜಾನಿ ಮಾಸ್ಟರ್‌, ಟಾಲಿವುಡ್, ಬಾಲಿವುಡ್‌, ಕಾಲಿವುಡ್‌, ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್‌ ಹೀರೋಗಳಿಗೆ ಕೊರಿಯೋಗ್ರಫಿ ಮಾಡಿದ್ದಾರೆ.. ಇವರು ಆಂಧ್ರಪ್ರದೇಶ ಡಿಸಿಎಂ ಪವನ್‌ ಕಲ್ಯಾಣ್‌ ಅಭಿಮಾನಿಯಾಗಿದ್ದು, ಕಳೆದ ಆಂಧ್ರಪ್ರದೇಶ ಚುನಾವಣೆಯಲ್ಲಿ ಜನಸೇನಾ ಪಾರ್ಟಿ ಪರವಾಗಿ ಆಂಧ್ರಪ್ರದೇಶದಾದ್ಯಂತ ಪ್ರಚಾರ ಮಾಡಿದ್ದರು.. ಈ ಹಿಂದೆ ಕೂಡಾ ಜಾನಿ ಮಾಸ್ಟರ್‌ ವಿರುದ್ಧ ಒಂದು ಕೇಸ್‌ ದಾಖಲಾಗಿತ್ತು.. 2015ರಲ್ಲಿ ಕಾಲೇಜೊಂದರಲ್ಲಿ ಯುವತಿ ಮೇಲೆ ದಾಳಿ ಮಾಡಿದ ಪ್ರಕರಣದಲ್ಲಿ 2019ರಲ್ಲಿ ಅವರಿಗೆ ಮೇಡ್ಚಲ್‌ ಕೋರ್ಟ್‌ 6 ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು.. ಈಗ ಮತ್ತೊಂದು ಕೇಸ್‌ ದಾಖಲಾಗಿದ್ದು, ಅವರನ್ನು ಬಂಧಿಸುವ ಸಾಧ್ಯತೆ ಇದೆ.

Share Post