Skip to content
Friday, May 9, 2025
Latest:
  • ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆ ಮಾಡಿದ ಮಹಿಳೆ!
  • ಕೆಲಸದ ಒತ್ತಡ; ಸಾಫ್ಟ್ವೇರ್ ಇಂಜಿನಿಯರ್ ಆತ್ಮಹತ್ಯೆ!
  • ಇರಾನ್‌ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ!
  • KSRTC ಬಸ್‌ನಲ್ಲಿ ಚಪ್ಪಲಿಯಲ್ಲಿ ಬಡಿದಾಡಿಕೊಂಡ ಮಹಿಳೆಯರು!
  • ನೀರು ಹೆಚ್ಚು ಸೇವಿಸಿದರೆ ರಕ್ತದೊತ್ತಡ ನಿವಾರಿಸಬಹುದೇ..?
Latest News in Kannada | Kannada News Channel | ಕನ್ನಡ ಸುದ್ದಿ | NewsX Kannada |

  • Bengaluru
  • Districts
  • Politics
  • Crime
  • National
  • International
  • Cinema
  • Health
  • Sports
  • Others
    • ASTROLOGY
    • History
    • Interviews
    • Lifestyle
    • Technology
Bengaluru

ಜನವರಿ 20ರ ನಂತರ ಜಾತಿ ಗಣತಿ ವರದಿ ಸಲ್ಲಿಕೆ..?; ಬಿಡುಗಡೆಯಾಗುತ್ತಾ ವರದಿ..?

January 13, 2024 ITV Network

ಬೆಂಗಳೂರು; ಜಾತಿ ಗಣತಿ ವರದಿಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ರಾಜ್ಯ ಸರ್ಕಾರ ಜಾತಿ ಗಣತಿ ವರದಿಯನ್ನು ಸ್ವೀಕಾರ ಮಾಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಇದೇ ತಿಂಗಳ 20ರ ನಂತರ ಜಾತಿ ಗಣತಿ ವರದಿಯನ್ನು ರಾಜ್ಯ ಸರ್ಕಾರ ಸ್ವೀಕಾರ ಮಾಡುತ್ತೆ ಎಂದು ಹೇಳಲಾಗುತ್ತಿದೆ. 

ಜನವರಿ 30ಕ್ಕೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರ ಅಧಿಕಾರವಾಧಿ ಮುಕ್ತಾಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಅವರ ಅವಧಿ ಮುಗಿಯುವುದರೊಳಗೆ ಜಾತಿ ಗಣತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಜಯಪ್ರಕಾಶ್‌ ಹೆಗ್ಡೆ ರೆಡಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಕಾಂತರಾಜು ವರದಿ ಬದಲು ಬೇರೆ ಹೆಸರಿನಲ್ಲಿ ವರದಿ ಸಲ್ಲಿಕೆ ಮಾಡಲಾಗುತ್ತದೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಒಂದು ಕಡೆ ಒಕ್ಕಲಿಗರು ಹಾಗೂ ಲಿಂಗಾಯತರು ಜಾತಿ ಗಣತಿಯನ್ನು ವಿರೋಧ ಮಾಡುತ್ತಿದ್ದಾರೆ. ಹಿಂದುಳಿದ ವರ್ಗಗಳ ಸ್ವಾಮೀಜಿಗಳು ಜಾತಿಗಣತಿ ರಿಲೀಸ್‌ ಮಾಡುವಂತೆ ಒತ್ತಡ ಹೇರುತ್ತಿವೆ. ಹೀಗಾಗಿ ಸರ್ಕಾರ, ವರದಿ ಬಿಡುಗಡೆ ಮಾಡಿದರೂ ಕಷ್ಟ, ಮಾಡದಿದ್ದರೂ ಕಷ್ಟ. ಸಂದಿಗ್ದತೆಯಲ್ಲಿ ಸರ್ಕಾರ ಸಿಲುಕಿದೆ.

ಇದೇ ಜನವರಿ ತಿಂಗಳಲ್ಲಿ ಶೋಷಿತ ಸಮುದಾಯಗಳ ಒಕ್ಕೂಟದ ಸಮಾವೇಶ ಆಯೋಜಿಸಲಾಗಿದೆ. ಹೀಗಾಗಿ ಈ ಸಮಾವೇಶಕ್ಕೂ ಮೊದಲು ವರದಿಯನ್ನು ಸರ್ಕಾರ ಸ್ವೀಕಾರ ಮಾಡಬಹುದು ಎಂದು ಹೇಳಲಾಗುತ್ತಿದೆ. ಒಂದು ವೇಳೆ ವರದಿ ಸ್ವೀಕಾರ ಮಾಡಿದರೂ ಅದನ್ನು ರಿಲೀಸ್‌ ಮಾಡೋದನ್ನು ತಡ ಮಾಡಬಹುದು ಎನ್ನುವ ಮಾತುಗಳೂ ಕೇಳಿಬರುತ್ತಿವೆ.

 

Share Post
  • ವೈದ್ಯರು ಸತ್ತಿದ್ದಾರೆ ಎಂದರು; ಆಂಬುಲೆನ್ಸ್‌ನಲ್ಲಿ ಹೋಗುವ ರಸ್ತೆಗುಂಡಿ ಬದುಕಿಸಿಬಿಡ್ತು!
  • ಕಾಲುವೆಯಲ್ಲಿ ಪತ್ತೆಯಾಯಿತು ಮಾಜಿ ರೂಪದರ್ಶಿ ದಿವ್ಯಾ ಪಹುಜಾ ಮೃತದೇಹ

You May Also Like

ಕೆಂಪೇಗೌಡರ ಪರಿಕಲ್ಪನೆಯಂತೆ ಬೆಂಗಳೂರು ಅಭಿವೃದ್ಧಿ; ಪ್ರಧಾನಿ ಮೋದಿ

November 11, 2022 ITV Network

ವ್ಯಾಪಾರಿ ಜುಗರಾಜ್‌ ಕೊಲೆ ಪ್ರಕರಣ; ನಾಲ್ವರ ಅರೆಸ್ಟ್‌, 8.75ಕೆಜಿ ಚಿನ್ನ ಜಪ್ತಿ..!

June 7, 2022 ITV Network

ಇಂಗ್ಲೀಷ್‌ ಬದಲು ಹಿಂದಿ ಬಳಸಲು ಸಲಹೆ; ಅಮಿತ್‌ ಶಾ ಹೇಳಿಕೆಗೆ ಸಿದ್ದರಾಮಯ್ಯ ಕಿಡಿ

April 8, 2022 ITV Network
Copyright © 2025 Latest News in Kannada | Kannada News Channel | ಕನ್ನಡ ಸುದ್ದಿ | NewsX Kannada |. All rights reserved.
Theme: ColorMag by ThemeGrill. Powered by WordPress.