BengaluruCinema

ಕಡಲೆಕಾಯಿ ಪರಿಷೆಯಲ್ಲಿ ಬಿಗ್‌ ಬಾಸ್‌ ವೈಷ್ಣವಿ

ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ನಟಿ ಹಾಗೂ ಬಿಗ್ ಬಾಸ್ ಸೀಸನ್-8 ಸ್ಫರ್ಧಿಯಾಗಿದ್ದ ವೈಷ್ಣವಿ ಗೌಡ ಈ ಬಾರಿ ನಡೆದ ಕಡಲೆಕಾಯಿ ಪರಿಷೆಯಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್‍ಬಾಸ್ ಕಾರ್ಯಕ್ರಮದ ನಂತರ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಷಿವ್ ಆಗಿರುವ ವೈಷ್ಣವಿ ಗೌಡ ಇತ್ತೀಚೆಗಷ್ಟೇ ಕಡಲೆಕಾಯಿ ಪರಿಷೆಯಲ್ಲಿ ಎಂಜಾಯ್‌ ಮಾಡಿದ್ದಾರೆ.

ಸದ್ಯ ಕಡಲೆ ಕಾಯಿ ಪರಿಷೆಯ ಕಲರ್ ಫುಲ್ ವೀಡಿಯೋವೊಂದನ್ನು ವೈಷ್ಣವಿ ಗೌಡ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದು, ಈ ವೀಡಿಯೋದಲ್ಲಿ ವೈಷ್ಣವಿ ಜಾತ್ರೆಯಲ್ಲಿ ಆಟ ಆಡಿರುವುದು, ಅಭಿಮಾನಿಗಳು ಹಾಗೂ ಪೊಲೀಸರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿವುದು, ದೊಡ್ಡ ಗಣೇಶ ದೇವಾಲಯಕ್ಕೆ ಭೇಟಿ ನೀಡಿರುವುದನ್ನು ಕಾಣಬಹುದಾಗಿದೆ

 

Share Post