Cinema

ಬಾಲಿವುಡ್‌ ನಟಿ ರವೀನಾ ಟಂಡನ್‌ ತಂದೆ ಇನ್ನಿಲ್ಲ

ಮುಂಬೈ: ನಟಿ ರವೀನಾ ಟಂಡನ್‌ ಅವರ ತಂದೆ ಹಾಗೂ ಖ್ಯಾತ ನಿರ್ಮಾಪಕ, ನಿರ್ದೇಶಕ ರವಿ ಟಂಡನ್‌ ನಿಧನರಾಗಿದ್ದಾರೆ. ಅವರಿಗೆ ಎಂಬತ್ತಾರು ವರ್ಷ ವಯಸ್ಸಾಗಿತ್ತು. ಈ ವಿಷಯವನ್ನು ರವೀನಾ ಟಂಡನ್‌ ಅವರು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಭಾವನಾತ್ಮಕ ಬರಹದೊಂದಿಗೆ, ತಂದೆಯೊಂದಿಗಿ ಫೋಟೋವನ್ನು ರವೀನಾ ಟಂಡನ್‌ ಪೋಸ್ಟ್‌ ಮಾಡಿದ್ದಾರೆ.

ನೀವು ಯಾವಾಗಲೂ ನನ್ನೊಂದಿಗೆ ನಡೆಯುತ್ತೀರಿ. ನಾನು ಯಾವಾಗಲೂ ನೀವಾಗಿರುತ್ತೇನೆ. ನಾನು ಎಂದಿಗೂ ನಿಮ್ಮನ್ನು ಬಿಡುವುದಿಲ್ಲ. ಲವ್ ಯು ಅಪ್ಪಾ ಎಂದು ರವೀನಾ ಬರೆದುಕೊಂಡಿದ್ದಾರೆ.

 

Share Post