Districts

ಬೊಮ್ಮಾಯಿ, ಈಶ್ವರಪ್ಪನವರೇ ಹೀಗೆ ಮಾಡೋದ್ರಿಂದ ಒಂದೇ ಒಂದು ವೋಟು ಸಿಗೋದಿಲ್ಲ-ಇಬ್ರಾಹಿಂ

ಮಂಡ್ಯ: ಅಲ್ಲಾಹು ಅಕ್ಬರ್‌ ಘೋಷಣೆ ಕೂಗಿದ್ದ ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್‌ ಮನೆಗೆ ಸಿಎಂ ಇಬ್ರಾಹಿಂ ಭೇಟಿ ನೀಡಿದ್ದಾರೆ. ಬಳಿಕ ಮಾತನಾಡಿದ ಇಬ್ರಾಹಿಂ ವಿದ್ಯಾರ್ಥಿ ಕುಟುಂಬ ಅಷ್ಟನೂ ಸ್ಥಿವಂತರಲ್ಲ. ಬಡವರು ಕಷ್ಟಪಟ್ಟು ಕೆಲಸ ಮಾಡಿ ತಮ್ಮ ಜೀವನ ನಡೆಸುತ್ತಿದ್ದಾರೆ. ಆಕೆ ಧೈರ್ಯವನ್ನು ಮೆಚ್ಚಿ ಬಹುಮಾಣ ಕೊಡ್ತಿದಾರೆ ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ತನಗೆ ಬಂದಿರುವ ಹಣದಲ್ಲಿ ಸಮಾಜ ಮುಖಿ ಕಾರ್ಯಗಳನ್ನು ಮಾಡುವುದಾಗಿ ಹೇಳಿದ್ದಾಳೆ. ಆಂಬುಲೆನ್ಸ್‌ ನೀಡಿ ಬಡರೋಗಿಗಳಿಗೆ ಸಹಾಯವಾಗಲಿ ಅಂದಿದ್ದಾಳೆ. ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶ ಇಲ್ಲ ಎಂದಿದ್ದಾರೆ.

ಸೆರಗು ಸಂಸ್ಕೃತಿಯ ಒಂದು ಭಾಗ ಅಷ್ಟೇ ಧರ್ಮ ಅಲ್ಲ ಯಾವುದೇ ಹಿಂದೂ ದೇವತೆಗಳೂ ಪ್ಯಾಂಟ್‌ ಹಾಕಿಲ್ಲ. ಸೀರೆ ಉಟ್ಟಿದ್ದಾರೆ. 16 ಅಡಿ ಇಳಕಲ್ ಸೀರೆ ಉಟ್ಟ ಮೇಲೆ ತಲೆ ಮೇಲೆ ಸೆರಗು ಹಾಕುತ್ತಾರೆ. ನ್ಯಾಯಾಲಯದ ಆದೇಶಕ್ಕೆ ನಾನು ತಲೆಬಾಗುತ್ತೇನೆ. ವಿದ್ಯಾರ್ಥಿನಿ ಧೈರ್ಯವನ್ನು ಮೆಚ್ಚಬೇಕು ಅಷ್ಟು ಹುಡುಗರ ನಡುವೆ ಘೋಷಣೆ ಕೂಗಿದ್ದಾಳೆ. ಜೈಶ್ರೀರಾಮ್‌ ಅಂದ್ರೆ ತಪ್ಪಲ್ಲ ಅಂತಾದ್ರೆ ಅಲ್ಲಾಹು ಅಕ್ಬರ್‌ ಅಂತ ಕೂಗಿದ್ರೆ ಪ್ರಚೋದನೆನಾ..? ಅದು ಪ್ರಚೋದನೆ ಅಲ್ಲ ನಾನು ನನ್ನ ಭಾಷಣದ ವೇಳೆ ಹರಹರ ಮಹದೇವ ಎನ್ನುತ್ತೇನೆ ಅದು ಪ್ರಚೋದನೆನಾ..? ಆಕೆಯ ಧೈರ್ಯಕ್ಕೆ ಉಡುಗೊರೆ ಕೊಟ್ಟರೆ ಅದು ತಪ್ಪಿಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ. ಈಶ್ವರಪ್ಪ ಮತ್ತು ಸಿಎಂ ಬೊಮ್ಮಾಯಿಯವರಿಗೆ ಮನವಿ ಮಾಡ್ತೀನಿ ವೋಟಿಗಾಗಿ ಇಂತಹ ಕೆಲಸ ಮಾಡೋದನ್ನು ಬಿಡಿ ಹೀಗೆ ಮಾಡುವುದರಿಂದ ಒಂದೇ ಒಂದು ವೋಟು ನಿಮಗೆ ಬರೋದಿಲ್ಲ ಎಂದು ವಾರ್ನಿಂಗ್‌ ಮಾಡಿದ್ದಾರೆ.

Share Post