CinemaLifestyleNational

ಮೂರನೇ ಪತ್ನಿಗೂ ಡಿವೋರ್ಸ್‌..?; ಪವನ್‌ ಕಲ್ಯಾಣ್‌ ಕೊಟ್ಟ ಉತ್ತರ ಎಂಥಾದ್ದು..?

ಹೈದರಾಬಾದ್‌; ಟಾಲಿವುಡ್‌ ನಟ ಪವನ್‌ ಕಲ್ಯಾಣ್‌ ಈಗ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಮುಂಬರುವ ಆಂಧ್ರ ವಿಧಾನಸಭಾ ಚುನಾವಣೆಯಲ್ಲಿ ಅವರ ಪಕ್ಷ ಜನಸೇನಾ ಸ್ಪರ್ಧೆ ಮಾಡುತ್ತಿದ್ದು, ಅದಕ್ಕಾಗಿ ಅವರು ವಾರಾಹಿ ಯಾತ್ರೆ ಶುರು ಮಾಡಿದ್ದಾರೆ. ಈ ನಡುವೆ ಅವರ ವೈಯಕ್ತಿಕ ವಿಚಾರಗಳು ಹೆಚ್ಚು ಸುದ್ದಿಯಾಗುತ್ತಿವೆ. ಪವನ್‌ ಕಲ್ಯಾಣ್‌ ಅವರು ಮೂರನೇ ಪತ್ನಿಗೂ ಡಿವೋರ್ಸ್‌ ನೀಡ್ತಿದ್ದಾರೆ ಅನ್ನೋ ಸುದ್ದಿ ಇತ್ತೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಇದೀಗ ಇದಕ್ಕೆ ಪವನ್‌ ಕಲ್ಯಾಣ್‌ ಉತ್ತರ ಕೊಟ್ಟಿದ್ದು, ಗಾಸಿಪ್‌ ಮಾಡುವವರ ಬಾಯಿಗೆ ಬೀಗ ಹಾಕಿದ್ದಾರೆ.

ಮೂರನೇ ಪತ್ನಿ ಅನ್ನಾ ಲೇಜ್ನೇವಾರಿಂದಲೂ ಪವನ್‌ ಕಲ್ಯಾಣ್‌ ದೂರವಾಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಹೀಗಿರುವಾಗಲೇ ಪತ್ನಿ ಅನ್ನಾ ಜೊತೆ ಇರುವ ಫೋಟೋ ಒಂದನ್ನು ಪವನ್‌ ಕಲ್ಯಾಣ್‌ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ. ಟ್ವಿಟರ್‌ ಖಾತೆಯಲ್ಲಿ ಇಬ್ಬರೂ ನಗುನಗುತ್ತಾ ಹೆಜ್ಜ ಹಾಕ್ತಿರುವ ಫೋಟೋ ಅದಾಗಿದೆ. ಇದೊಂದು ಪೋಸ್ಟ್‌ ಗಾಸಿಪ್‌ ಮಾಡುವವರು ಬಾಯಿ ಮುಚ್ಚಿಕೊಳ್ಳಲು ಸಾಕಾಗಿದೆ.

ಪವನ್‌ ಕಲ್ಯಾಣ್‌ ಅವರು ಮೊದಲಿಗೆ ನಂದಿನಿ ಎಂಬುವವರನ್ನು ಮದುವೆಯಾಗಿದ್ದರು. ಆದ್ರೆ ಕೆಲ ವರ್ಷಗಳ ಬಳಿಕ ಅವರು ನಂದಿನಿಗೆ ಡಿವೋರ್ಸ್‌ ನೀಡಿದ್ದರು. ಅನಂತರ ರೇಣು ದೇಸಾಯಿ ಅವರನ್ನು ವಿವಾಹವಾಗಿದ್ದರು. ಅವರಿಗೆ ಇಬ್ಬರು ಮಕ್ಕಳಾದ ಮೇಲೆ ಇಬ್ಬರೂ ಬೇರೇ ಬೇರೆಯಾದರು. ಅನಂತರ ಪವನ್‌ ಅವರು ರಷ್ಯಾ ಮೂಲದ ಅನ್ನಾ ಲೇಜ್ನೇವಾ ಜೊತೆ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡರು. ಇವರಿಗೆ ಇಬ್ಬರು ಮಕ್ಕಳೂ ಇದ್ದಾರೆ.

Share Post