BengaluruPolitics

ಗೃಹಜ್ಯೋತಿಗೆ ಭಾರಿ ರೆಸ್ಪಾನ್ಸ್‌; 17 ದಿನದಲ್ಲಿ 1 ಕೋಟಿ ನೋಂದಣಿ

ಬೆಂಗಳೂರು; ಗೃಹ ಉಪಯೋಗಕ್ಕೆ ಉಚಿತ ವಿದ್ಯುತ್‌ ನೀಡುವ ಗೃಹಜ್ಯೋತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್‌ ಸಿಗುತ್ತಿದೆ. ಉಚಿತ ವಿದ್ಯುತ್‌ಗಾಗಿ ರಿಜಿಸ್ಟರ್‌ ಮಾಡಿಕೊಳ್ಳಬೇಕಿದ್ದು, 17 ದಿನದಲ್ಲಿ ಕೋಟಿ ನೋಂದಣಿಯಾಗಿದೆ. ನಿನ್ನೆಯವರೆಗೆ 1 ಕೋಟಿ 20 ಸಾವಿರದ 163 ಮಂದಿ ಉಚಿತ ವಿದ್ಯುತ್‌ಗಾಗಿ ನೋಂದಣಿ ಮಾಡಿದ್ದಾರೆ.

ಬೆಸ್ಕಾಂ ವ್ಯಾಪ್ತಿಯಲ್ಲಿ 41ಲಕ್ಷ 14 ಸಾವಿರ 567, ಚೆಸ್ಕಾಂ ವ್ಯಾಪ್ತಿಯಲ್ಲಿ 15 ಲಕ್ಷ 35 ಸಾವಿರದ 045, ಜೆಸ್ಕಾಂ ವ್ಯಾಪ್ತಿಯಲ್ಲಿ 10 ಲಕ್ಷ 54 ಸಾವಿರದ 359, ಹೆಸ್ಕಾಂ ವ್ಯಾಪ್ತಿಯಲ್ಲಿ 21ಲಕ್ಷ 09 ಸಾವಿರದ 473,  ಮೆಸ್ಕಾಂ ವ್ಯಾಪ್ತಿಯಲ್ಲಿ 11 ಲಕ್ಷ 56 ಸಾವಿರದ 294 ಹಾಗೂ HRECS ವ್ಯಾಪ್ತಿಯಲ್ಲಿ 50 ಸಾವಿರದ 425 ಮಂದಿ ನೋಂದಾಯಿಸಿದ್ದಾರೆ. ಈ ತಿಂಗಳ ಅಂತ್ಯಕ್ಕೆ ಒಂದೂವರೆ ಕೋಟಿ ನೋಂದಣಿಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

Share Post