Cinema

ದೇಶಾದ್ಯಂತ ರಾಧೆ ಶ್ಯಾಮ್‌ ಸಿನಿಮಾ ಜ್ವರ…ಒಂದು ವಾರಗಳ ಕಾಲ ಪ್ರಮೋಷನ್‌ ಈವೆಂಟ್ಸ್

ಹೈದರಾಬಾದ್:‌ ರಾಧೇಶ್ಯಾಮ್ ಚಿತ್ರತಂಡ ಈ ಹಿಂದೆ ಬಿಡುಗಡೆಯಾದ ಟ್ರೇಲರ್ ಜೊತೆಗೆ ಈಗ ಮತ್ತೊಂದು ಸಣ್ಣ ಆಕ್ಷನ್ ಟ್ರೈಲರ್ ಬಿಡುಗಡೆ ಮಾಡಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಮಾರ್ಚ್ 11ಕ್ಕೆ ರಿಲೀಸ್ ಮಾಡಬೇಕಿದೆ ಹೆಚ್ಚು ಸಮಯವಿಲ್ಲದ ಕಾರಣ ಒಂದು ವಾರಗಳ ಕಾಲ ಪ್ರಮೋಷನ್‌ ಈವೆಂಟ್ಸ್‌ ಮಾಡಲು ಪ್ಲಾನ್‌ ಮಾಡಿದ್ದಾರಂತೆ.

ಸಿನಿಮಾ ಮೊಂದೂಡಿದ್ದ ಕಾರಣದಿಂದಾಗಿ ಪ್ರಮೋಷನ್‌ ತಂಟೆಗೆ ಹೋಗದ ಮೇಕರ್ಸ್‌ ಈಗ ಪ್ರಚಾರದ ಭರಾಟೆಯನ್ನು ಪ್ರಾರಂಭಿಸಿದ್ದಾರೆ. ವ್ಯಾಲೆಂಟೈನ್ಸ್ ಡೇ ಸ್ಪೆಷಲ್ ಎಂದು ಲವ್ಲಿ ಟೀಸರ್ ಬಿಡುಗಡೆ ಮಾಡಿದ್ರು.  ಮೊದಲು ಅಮಿತಾಬ್ ಬಚ್ಚನ್ ವಾಯ್ಸ್ ಓವರ್ ನೀಡಿರುವ ಅಪ್ ಡೇಟ್ ಇತ್ತು. ಈಗ ಮತ್ತೊಂದು ಆ್ಯಕ್ಷನ್ ಟ್ರೈಲರ್ ಬಿಡುಗಡೆ ಮಾಡಿ ಎಲ್ಲರ ಮನಸಲ್ಲಿ ಕುತೂಹಲವನ್ನು ಸೃಷ್ಟಿ ಮಾಡಿದೆ. ಸಿನಿಮಾ ಅಪ್‌ಡೇಟ್‌ಗಳ ಜೊತೆಗೆ ರಾಧೇಶ್ಯಾಮ್ ತಂಡ  ಲೈವ್ ಪ್ರಚಾರಗಳನ್ನು ಸಹ ನಡೆಸುತ್ತಿದೆ.

ಇದಕ್ಕೂ ಮುನ್ನ ಮಾರ್ಚ್ 2 ರಂದು ಮತ್ತೊಂದು ಟ್ರೇಲರ್ ಅನ್ನು ಬಿಡುಗಡೆ ಮಾಡುವ ಉದ್ದೇಶದಿಂದ  ಚಿ ಕಾರ್ಯಕ್ರಮವನ್ನು ಆಯೋಜಿಸಿತ್ತು.  ಮಾರ್ಚ್ 3 ರಂದು ಹಿಂದಿಯಲ್ಲಿ ಮತ್ತು ಮಾರ್ಚ್ 4 ರಂದು  ತಮಿಳುನಾಡಿನಲ್ಲಿ ಪ್ರೊಮೋಷನ್‌ ಹಾಗೆ ಸಂದರ್ಶನಗಳನ್ನು ಆಯೋಜಿಸಿತು. ಚೆನ್ನೈನಲ್ಲಿ ಈ ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿ ನಡೆಯಲಿದೆ. ನಂತರ ಮಾರ್ಚ್ 6-7 ರಂದು ತೆಲುಗು ಭಾಷೆಯಲ್ಲಿ ಪ್ರಚಾರ ಕಾರ್ಯಕ್ರಮವನ್ನು ಆಯೋಜಿಸುತ್ತದೆ.

Share Post