CinemaNational

ಊಟಿಯಲ್ಲಿ 16 ಕೋಟಿ ಬೆಲೆಯ ಜಾಗ ಖರೀದಿಸಿದ ಚಿರಂಜೀವಿ!

ಊಟಿ; ಮೆಗಾಸ್ಟಾರ್ ಚಿರಂಜೀವಿ ಬೆಂಗಳೂರಿನ ದೇವನಹಳ್ಳಿ ಬಳಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಫಾರ್ಮ್ ಹೌಸ್ ಹೊಂದಿದ್ದಾರೆ.. ಬೆಂಗಳೂರು ಅಷ್ಟೇ ಅಲ್ಲ, ದೇಶದಲ್ಲಿ ಹಲವು ಸ್ಥಳಗಳಲ್ಲಿ ಅವರು ಆಸ್ತಿ ಹೊಂದಿದ್ದಾರೆ.. ಇದೀಗ ಅವರು ಊಟಿಯ ಗುಡ್ಡ ಪ್ರದೇಶದಲ್ಲಿ ಜಾಗ ಖರೀದಿ ಮಾಡಿದ್ದಾರೆ..

  ಫಾರ್ಮ್ ಹೌಸ್ ಮಾಡೋದಕ್ಕಾಗಿಯೇ ಈ ಜಾಗ ಖರೀದಿ ಮಾಡಿದ್ದಾರೆ.. ಒಂದು ಎಕರೆಗೆ 2.6 ಕೋಟಿಯಂತೆ ಆರುವರೆ ಎಕರೆ ಜಮೀನು ಖರೀದಿ ಮಾಡಲಾಗಿದೆ. ಒಟ್ಟು 16 ಕೋಟಿ ರೂಪಾಯಿ ಇದಕ್ಕಾಗಿ ಖರ್ಚು ಮಾಡಲಾಗಿದೆ..

  ಸಾವಿರಾರು ಕೋಟಿ ಆಸ್ತಿ ಇರುವ ಚಿರಂಜೀವಿ ಸ್ವಂತ ಜೆಟ್ ವಿಮಾನ ಕೂಡಾ ಹೊಂದಿದ್ದಾರೆ. ಚಿರಂಜೀವಿ ಪುತ್ರ ರಾಮ್ ಚರಣ್ ಹಾಗೂ ಸೊಸೆ ಉಪಾಸನಾ ಈಗಾಗಲೇ ಇಲ್ಲಿಗೆ ತೆರಳಿ ಒಂದಷ್ಟು ಐಡಿಯಾಗಳನ್ನು ನೀಡಿದ್ದಾರೆ.

Share Post