Cinema

ಪುನೀತ್‌ ಹುಟ್ಟು ಹಬ್ಬಕ್ಕೆ ಗಂಧದ ಗುಡಿ ಪೋಸ್ಟರ್‌ ಬಿಡುಗಡೆ ಮಾಡಿದ ಪಿಆರ್‌ಕೆ ಪ್ರೊಡಕ್ಷನ್ಸ್

ಬೆಂಗಳೂರು: ಕರುನಾಡಿನ ಮೇಲೆ ಅಪಾರ ಪ್ರೀತಿ, ಕಾಳಜಿ ಹೊಂದಿರುವ ಪುನೀತ್‌ರಾಜ್‌ಕುಮಾರ್‌ ಗಂಧದ ಗುಡಿ ಎಂಬ ಸಾಕ್ಷ್ಯ ಚಿತ್ರವನ್ನು ತಯಾರು ಮಾಡಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಇಂದು ಅವರ ಹುಟ್ಟು ಹಬ್ಬ ಹಿನ್ನೆಲೆ ಪಿಆರ್‌ಕೆ ಪ್ರೊಡೆಕ್ಷನ್ಸ್‌ ಗಂಧದ ಗುಡಿ ಪೋಸ್ಟರ್‌ ಬಿಡುಗಡೆ ಮಾಡಿದ್ದಾರೆ. ಪುನೀತ್​ ಕರ್ನಾಟಕದ ಅರಣ್ಯ ಮತ್ತು ವನ್ಯಜೀವಿಗಳ ಕುರಿತ ಡಾಕ್ಯುಮೆಂಟರಿಯ ಟೀಸರ್‌ ಡಿಸೆಂಬರ್​ನಲ್ಲಿ ಗಂಧದಗುಡಿಯ ಟೈಟಲ್​ ಟೀಸರ್​ ಬಿಡುಗಡೆಯಾಗಿತ್ತು. ಕರುನಾಡಿನ ಪ್ರಕೃತಿ ಸೌಂದರ್ಯವನ್ನು ಮನಮೋಹಕವಾಗಿ ಸೆರೆ ಹಿಡಿದಿರುವ ಈ ಡಾಕ್ಯುಮೆಂಟರಿ ಇದೇ ವರ್ಷ ಥಿಯೇಟರ್​ನಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ. ನವೆಂಬರ್​ 1 ಕನ್ನಡ ರಾಜ್ಯೋತ್ಸವಕ್ಕೆ  ಟೀಸರ್ ರಿಲೀಸ್​ ಮಾಡಬೇಕೆಂಬುದು ಪುನೀತ್​ ಕನಸಾಗಿತ್ತು. ಆದರೆ, ಕನಸು ನನಸಾಗುವ ಮೊದಲೇ ವಿಧಿ ಬೇರೊಂದೇ ಆಟವಾಡಿತ್ತು. ಕೋಟ್ಯಾಂತರ ಅಭಿಮಾನಿಗಳ ಕಣ್ಣೀರಿಗೆ ಕಾರಣವಾಯ್ತು. ಎಲ್ಲರನ್ನು ಅಗಲಿ ಪುನೀತ್‌ ಇಹಲೋಕ ತ್ಯಜಿಸಿದ್ರು. ಈ ಕಾರಣಕ್ಕೆ ಆ ಟೀಸರ್ ಆಗ​ ರಿಲೀಸ್​ ಆಗಿರಲಿಲ್ಲ. ತದನಂತರ ಡಿ. 6ರಂದು ಟೀಸರ್​​ ಬಿಡುಗಡೆ ಮಾಡಿದ್ರು.

ಇದೀಗ ಇಂದು ಪುನೀತ್‌ ಅವರ ಹುಟ್ಟು ಹಬ್ಬ ಕಾರಣದಿಂದಾಗಿ ಹೊಸ ಪೋಸ್ಟರ್‌ ರಿಲೀಸ್‌ ಮಾಡಿ ಅಭಿಮಾನಿಗಳಿಗೆ ಮತ್ತಷ್ಟು ಸಿಹಿ ನೀಡಿದ್ದಾರೆ ಪಿಆರ್‌ಕೆ ಪ್ರೊಡೆಕ್ಷನ್.‌

Share Post