ಚಿತ್ರೀಕರಣ ಸ್ಥಳದಲ್ಲಿ ಲೈಟ್‌ಬಾಯ್ ಸಾವು!; ಯೋಗರಾಜ್ ಭಟ್ ವಿರುದ್ಧ ಎಫ್‌ಐಆರ್!
ಬೆಂಗಳೂರು; ‘ಮನದ ಕಡಲು’ ಸಿನಿಮಾ ಶೂಟಿಂಗ್ ಸ್ಥಳದಲ್ಲಿ ದುರಂತ ನಡೆದಿದ್ದು, 30 ಅಡಿ ಎತ್ತರದಿಂದ ಬಿದ್ದು ಲೈಟ್‌ಮ್ಯಾನ್ ದಾರುಣವಾಗಿ ಸಾವನ್ನಪ್ಪಿದ್ದಾನೆ.. ಸುರಕ್ಷಿತಾ ಸಲಕರಣೆಗಳಿಲ್ಲದೆ ಲೈಟ್ ಮ್ಯಾನ್ 30 ಅಡಿ ಕಂಬ ಹತ್ತಿದ್ದ.. ಈ ವೇಳೆ ಆಯತಪ್ಪಿ ಕೆಳಗೆ ಬಿದ್ದಿದ್ದು, ಸಾವನ್ನಪ್ಪಿದ್ದಾನೆ.. ಈ ಹಿನ್ನೆಲೆಯಲ್ಲಿ ನಿರ್ದೇಶಕ ಯೋಗರಾಜ್ ಭಟ್, ಅಡಕಮಾರನಹಳ್ಳಿ ಕೃಷ್ಣಪ್ಪ, ಮ್ಯಾನೇಜರ್ ಸುರೇಶ್ ಹಾಗೂ ಅಸಿಸ್ಟೆಂಟ್ ಮ್ಯಾನೇಜರ್ ಮನೋಹರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ..
ಸೆಪ್ಟೆಂಬರ್ 3ರಂದು 30 ಅಡಿ ಎತ್ತರದ ಅಲ್ಯೂಮಿನಿಯಂ ರೋಸ್ಟ್ರಮ್ ಮೇಲೆ ಹತ್ತಿ ಲೈಟ್ ಬಿಚ್ಚುತ್ತಿರುವಾಗ ಲೈಟ್ ಮ್ಯಾನ್ ಮೋಹನ್ ಕುಮಾರ್ ಕೆಳಗೆ ಬಿದ್ದಿದ್ದರು.. ಇದರಿಂದ ಅವರ ತಲೆಗೆ ಗಂಭೀರವಾದ ಗಾಯವಾಗಿತ್ತು.. ಹೀಗಾಗಿ ಕೂಡಲೇ ಅವರನ್ನು ಗೊರಗುಂಟೆಪಾಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.. ಆದ್ರೆ ಚಿಕಿಯ್ಸೆ ಫಲಿಸದೇ ಮೋಹನ್ ಕುಮಾರ್ ಸಾವನ್ನಪ್ಪಿದ್ದಾರೆ.. ಈ ಬಗ್ಗೆ ಲೈಟ್‌ಮ್ಯಾನ್ ಮೋಹನ್ ಸಹೋದರ ಶಿವರಾಜ್ ಅವರು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಿದ್ದರು..
ಅಡಕಮಾರನಗಳ್ಳಿ ಗೋಡೌನ್ ಒಂದರಲ್ಲಿ ಮನದ ಕಡಲು ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆಯೇ ಈ ಅವಘಡ ನಡೆದಿತ್ತು.