CinemaCrime

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ಗೆ ಮತ್ತೆ ಜೀವ ಬೆದರಿಕೆ!

ಮುಂಬೈ; ಇತ್ತೀಚೆಗಷ್ಟೇ ಮುಂಬೈನಲ್ಲಿ ಮಾಜಿ ಸಚಿವ ಬಾಬಾ ಸಿದ್ದಿಕಿ ಕೊಲೆಯಾಗಿತ್ತು.. ಈ ಬೆನ್ನಲ್ಲೇ ನಟ ಸಲ್ಮಾನ್‌ ಖಾನ್‌ಗೆ ಬಿಗಿ ಭದ್ರತೆ ಒದಗಿಸಲಾಗಿತ್ತು.. ಇದರ ನಡುವೆಯೂ ಸಲ್ಮಾನ್‌ ಖಾನ್‌ ಗೆ ಜೀವ ಬೆದರಿಕೆ ಹಾಕಲಾಗಿದೆ.. ಲಾರೆನ್ಸ್‌ ಬಿಷ್ಣೊಯ್‌ ಗ್ಯಾಂಗ್‌ ಸಹಚರನೊಬ್ಬ ಮುಂಬೈ ಟ್ರಾಫಿಕ್‌ ಪೊಲೀಸರಿಗೆ ಸಂದೇಶ ರವಾನಿಸಲಾಗಿದ್ದು, 5 ಕೋಟಿ ರೂಪಾಯಿ ಕೊಡಬೇಕು. ಇಲ್ಲದಿದ್ದರೆ ಬಾಬಾ ಸಿದ್ದಕಿಯ ರೀತಿ ಭಯಾನಕ ಸಾವು ನಿಮ್ಮದಾಗುತ್ತೆ ಎಂದು ಬೆದರಿಸಲಾಗಿದೆ..
ಇದನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಬಾಬಾ ಸಿದ್ದಕಿಗಿಂತಲೂ ಪರಿಸ್ಥಿತಿ ಕೆಟ್ಟದಾಗಿರಲಿದೆ ಎಂದೂ ಎಚ್ಚರಿಕೆ ನೀಡಲಾಗಿದೆ.. ಈ ಬಗ್ಗೆ ಈಗ ಮುಂಬೈ ಪೊಲೀಸರು ತನಿಖೆ ಮಾಡುತ್ತಿದ್ದು, ಮೆಸೇಜ್‌ ಎಲ್ಲಿಂದ ಬಂತು, ಯಾರು ಕಳುಹಿಸಿದರು ಎಂಬ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ.. ಈ ಹಿನ್ನೆಲೆಯಲ್ಲಿ ಸಲ್ಮಾನ್‌ ಖಾನ್‌ ಮನೆ ಮುಂದೆ ಭದ್ರತೆ ಮತ್ತಷ್ಟು ಬಿಗಿಗೊಳಿಸಲಾಗಿದೆ..
ಇನ್ನೊಂದೆಡೆ ಆರೋಪಿಯೊಬ್ಬನನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.. ಹರ್ಯಾಣ ಮೂಲದ ಸುಖಾ ಎಂಬಾತನನ್ನು ನವಿ ಮುಂಬೈ ಪೊಲೀಸರು ಬಂಧಿಸಿದ್ದಾರೆ.. ಹರಿಯಾಣದ ಪಾಣಿಪತ್‌ ನಿಂದ ಆತನನ್ನು ಬಂಧಿಸಿ ಕರೆತರಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ..

Share Post