Cinema

ಪುನೀತ್‌ ರಾಜ್‌ಕುಮಾರ್‌ ರಸ್ತೆ ನಾಮಕರಣಕ್ಕೆ ಬಿಬಿಎಂಪಿಯಿಂದ ಅನುಮೋದನೆ

ಬೆಂಗಳೂರು : ಪುನೀತ್‌ ರಾಜ್‌ ಕುಮಾರ್‌ ರಸ್ತೆ ನಾಮಕರಣಕ್ಕೆ ಬಿಬಿಎಂಪಿ ಅಧಿಕೃತ ಅನುಮೋದನೆ ನೀಡಿದೆ. ಬಿಬಿಎಂಪಿ ಆಡಳಿತ ಅಧಿಕಾರಿಯಾಗಿರುವ ರಾಕೇಶ್‌ ಸಿಂಗ್‌ ಅವರು 12ಕಿಮೀ ಉದ್ದದ ವರ್ತುಲ ರಸ್ತೆಗೆ ʼಪುನೀತ್‌ ರಾಜ್‌ ಕುಮಾರ್‌ ರಸ್ತೆʼ ಎಂದು ನಾಮಕರಣ ಮಾಡಲು ಅನುಮೋದನೆ ನೀಡಲಾಗಿದೆ.

ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್‌ನಿಂದ ಬನ್ನೇರುಘಟ್ಟ ರಸ್ತೆಯ ವೆಗಾಸಿಟಿ ಮಾಲ್‌ ಜಂಕ್ಷನ್‌ ವರೆಗಿನ 12ಕಿಲೋಮೀಟರ್‌ ರಸ್ತೆಗೆ ಪುನೀತ್‌ ರಾಜ್‌ಕುಮಾರ್‌ ರಸ್ತೆ ಎಂದು ನಾಮಕರಿಸಲಿದ್ದಾರೆ. ಈ ರಸ್ತೆಯು ಹೊಸಕೆರೆಹಳ್ಳಿ-ದೇವೇಗೌಡ ಪೆಟ್ರೋಲ್‌ ಬಂಕ್-‌ ಕದಿರೇನಹಳ್ಳಿ ಪಾರ್ಕ್-‌ ಸಾರಕ್ಕಿ ಸಿಗ್ನಲ್‌ – ಜೆಪಿ ನಗರವನ್ನು ಸಂಪರ್ಕಿಸಲಿದೆ.

ಪುನೀತ್‌ ಅವರ ಹೆಸರನ್ನು ರಸ್ತೆಗೆ ಇಡುವ ಕಾರಣ ಬಿಬಿಎಂಪಿ ಡಿಸೆಂಬರ್‌ ಅಂತ್ಯದಲ್ಲಿ ಪತಿಕಾ ಪ್ರಕಟಣೆ ಹೊರಡಿಸಿಸತ್ತು. ಆಕ್ಷೇಪಣೆ ಇದ್ದಲ್ಲಿ 30ದಿನದಲ್ಲಿ ತಿಳೀಸಲಾಗಿತ್ತು. ಯಾವುದೇ ಆಕ್ಷೇಪಣೆಗಳು ಇಲ್ಲದ ಕಾರಣ ಅನುಮೋದನೆ ನೀಡಲಾಗಿದೆ.

Share Post