Cinema

ಮಾಧ್ಯಮಕ್ಕೆ ಧನ್ಯವಾದ ತಿಳಿಸಿದ ಅನುಷ್ಕಾ ಶರ್ಮ

ಬೆಂಗಳೂರು : ಅನುಷ್ಕಾ ಶರ್ಮ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯ ಮೂಲಕ ಮಾಧ್ಯಮದವರಿಗೆ ಧನ್ಯವಾದ ತಿಳಿಸಿದ್ದಾರೆ. ಅನುಷ್ಕಾ ಶರ್ಮ ಆಗಲಿ ಅಥವಾ ವಿರಾಟ್‌ ಕೊಹ್ಲಿ ಆಗಲಿ ತಮ್ಮ ಮಗಳ ಪೂರ್ತಿ ಫೋಟೋವನ್ನು ಬಹಿರಂಗ ಪಡಿಸಿಲ್ಲ. ಮಗಳು ವಮಿಕಾ ಕರೆದುಕೊಂಡು ಎಲ್ಲೇ ಹೋದರೂ ಫೋಟೋ ತೆಗೆಯಲು ಮಾಧ್ಯಮದವರು ಮತ್ತು ಅಭಿಮಾನಿಗಳು ಯತ್ನಿಸುತ್ತಾರೆ.

ಹೀಗಿದ್ದರೂ ಮಾಧ್ಯಮದಲ್ಲಿ ಒಂದೂ ಫೋಟೋ ರಿವೀಲ್‌ ಮಾಡದೇ ಖಾಸಗಿತನ ಕಾಪಾಡಿದಕ್ಕೆ ಅನುಷ್ಕಾ ಶರ್ಮ ಧನ್ಯವಾದ ತಿಳಿಸಿದ್ದಾರೆ. ಈ ಕುರಿತು ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

Share Post