CinemaNational

ಉದ್ಯಮಿ ಜೊತೆ ಅಮಲಾ ಪೌಲ್‌ ಲಿಪ್‌ಲಾಕ್‌; ಯಾರು ಆ ಉದ್ಯಮಿ..?

ಮುಂಬೈ; ಖ್ಯಾತ ಬಾಲಿವುಡ್‌ ನಟಿ ಅಮಲಾ ಪೌಲ್‌ ಯುವಕನೊಬ್ಬನಿಗೆ ಲಿಪ್‌ಲಾಕ್‌ ಮಾಡಿರುವ ವಿಡಿಯೋ ವೈರಲ್‌ ಆಗಿದೆ. ಜಗತ್‌ ದೇಸಾಯಿ ಎಂಬುವವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಯಾರು ಆ ಜಗತ್‌ ದೇಸಾಯಿ ಎಂದು ನೋಡಿದಾಗ, ಅವರು ಒಬ್ಬ ಉದ್ಯಮಿ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲವೇ ಇದೇ ಜಗತ್‌ ದೇಸಾಯಿ ಜೊತೆ ಅಮಲಾ ಪೌಲ್‌ ಎರಡನೇ ಮದುವೆಯಾಗುತ್ತಿದ್ದಾರೆ ಎಂದು ಗೊತ್ತಾಗಿದೆ.

ಕನ್ನಡ ಸೂಪರ್ ಹಿಟ್ ಸಿನಿಮಾ ಹೆಬ್ಬುಲಿಯ ನಾಯಕಿಯಾಗಿ ಅಮಲಾ ಪೌಲ್ ನಟಿಸಿದ್ದರು. ಅವರೀಗ ಎರಡನೇ ಮದುವೆಯಾಗುತ್ತಿದ್ದು,  ಅಮಲಾ ಅವರ ಹುಟ್ಟು ಹಬ್ಬದ ದಿನದಂದೇ  ಜಗತ್‌ ದೇಸಾಯಿ ವಿಶೇಷವಾದ ಸನ್ನಿವೇಶ ಸೃಷ್ಟಿ ಮಾಡಿ ಅಮಲಾ ಪೌಲ್‌ ಕೈಗೆ ಉಂಗುರು ತೊಡಿಸಿದ್ದಾರೆ.

ಅಮಲಾಪೌಲ್‌ ಅವರು 2014ರಲ್ಲಿ ತಮಿಳು ನಿರ್ದೇಶಕ ವಿಜಯ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದ್ರೆ ಮದುವೆಯಾದ ಮೂರೇ ವರ್ಷಕ್ಕೆ ಅವರ ವೈವಾಹಿಕ ಜೀವನ ಮುರಿದುಬಿದ್ದಿತ್ತು.

 

Share Post