ವಿಪಕ್ಷಗಳ ಒಕ್ಕೂಟಕ್ಕೆ INDIA ಹೆಸರು ಪ್ರಶ್ನಿಸಿ ಅರ್ಜಿ; ಕೋರ್ಟ್‌ನಿಂದ ನೋಟಿಸ್ ಜಾರಿ
ಬೆಂಗಳೂರು; ಬಿಜೆಪಿ ಮೈತ್ರಿಕೂಟ ಎನ್‌ಡಿಎ ಮಣಿಸಲು ಕಾಂಗ್ರೆಸ್ ಸೇರಿ ಇತರ ಸಮಾನ ಮನಸ್ಕ ಪಕ್ಷಗಳು ಇಂಡಿಯನ್ ನ್ಯಾಷನಲ್ ಡೆವೆಲಪ್‌ಮೆಂಟಲ್ ಇನ್‌ಕ್ಲ್ಯೂಸಿವ್ ಅಲಯನ್ಸ್ ಎಂಬ ನಾಮಕರಣ ಮಾಡುತ್ತಿದೆ. ಇದರ ಶಾರ್ಟ್‌ಫಾರ್ಮ್ ಇಂಡಿಯಾ ಎಂದಾಗಿದೆ. ಹೀಗೆ ದೇಶದ ಹೆಸರನ್ನು ಇಟ್ಟುಕೊಂಡಿರುವುದನ್ನು ಬೆಂಗಳೂರು ವ್ಯಕ್ತಿಯೊಬ್ಬರು ದೆಹಲಿ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೋರ್ಟ್ ಚುನಾವಣಾ ಆಯೋಗ ಹಾಗೂ ಇತರ 26 ಪ್ರತಿಪಕ್ಷಗಳಿಗೆ ನೋಟಿಸ್ ಜಾರಿ ಮಾಡಿದೆ.
ಬೆಂಗಳೂರಿನ ಗಿರೀಶ್ ಭಾರದ್ವಾಜ್ ಎಂಬುವವರು ದೆಹಲಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ಇಂದು ಅದರ ವಿಚಾರಣೆ ನಡೆಯಿತು. ಪ್ರತಿ ಪಕ್ಷಗಳು ಇಂಡಿಯಾ ಪದ ಬಳಸಿದರೆ, ಪ್ರಧಾನಿ ಮೋಧಿ ಇಂಡಿಯಾಗೆ ವಿರುದ್ಧವಾಗಿದ್ದಾರೆ ಎಂದು ಬಿಂಬಿಸಿದಂತಾಗುತ್ತದೆ. ಇಂಡಿಯಾ ಎಂಬ ಪದ ವಿಪಕ್ಷಗಳಿಂದ ದುರ್ಬಳಕೆಯಾದಂತಾಗುತ್ತದೆ ಎಂದು ಗಿರೀಶ್ ಪರ ವಕೀಲರು ವಾದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್, ನೋಟಿಸ್ ಜಾರಿ ಮಾಡಿದೆ. ಜೊತೆಗೆ ಆಗಸ್ಟ್ 31ಕ್ಕೆ ವಿಚಾರಣೆ ಮುಂದೂಡಲಾಗಿದೆ.