BengaluruPolitics

ಬಿಜೆಪಿಯದ್ದು ಅಭಿವೃದ್ಧಿ ಅಜೆಂಡಾ ಅಲ್ಲ, ಎಮೋಷನಲ್‌ ಅಜೆಂಡಾ; ಡಿಕೆಶಿ

ಬೆಂಗಳೂರು; ಬಿಜೆಪಿ ಬರೀ ಭರವಸೆಗಳನ್ನು ಮಾತ್ರ ನೀಡುತ್ತೆ. ಅದು ಮಾಡ್ತೀವಿ, ಇದು ಮಾಡ್ತೀವಿ ಅಂತ ಪತ್ರಿಕೆಗಳಲ್ಲಿ ಜಾಹೀರಾತು ನೀಡುತ್ತೆ. ಆದ್ರೆ ಯಾವುದನ್ನೂ ಈಡೇರಿಸುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಅಭಿವೃದ್ಧಿಯ ಅಜೆಂಡಾ ಇಲ್ಲ. ಅವರು ಎಮೋಷನಲ್‌ ಅಜೆಂಡಾ ಬಳಸುತ್ತಿದ್ದಾರೆ. ಜನ ಅದಕ್ಕೆ ಸೊಪ್ಪು ಹಾಕೋದಿಲ್ಲ ಎಂದು ಹೇಳಿದರು.

ಈ ಬಾರಿಯ ಬಜೆಟ್‌ನಲ್ಲಿ ನೀವು ಏನು ನಿರೀಕ್ಷೆ ಮಾಡಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್‌, ಈ ಬಾರಿಯ ಬಜೆಟ್‌ನಲ್ಲಿ ಏನೂ ಇರೋದಿಲ್ಲ. ಅದು ಎಲೆಕ್ಷನ್‌ ಮ್ಯಾನಿಫೆಸ್ಟೋ ಬಜೆಟ್‌ ಆಗಿರುತ್ತೆ ಎಂದು ಉತ್ತರಿಸಿದರು.

Share Post