Cinema

ಮೊಗ್ಗಿನ ಮನಸು ಹುಡುಗಿಗೆ ಬರ್ತಡೇ ಸಂಭ್ರಮ: 38ನೇ ವಸಂತಕ್ಕೆ ಕಾಲಿಟ್ಟ ರಾಧಿಕಾ ಪಂಡಿತ್

ಬೆಂಗಳೂರು: ಮೊಗ್ಗಿನ ಮನಸು ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ನಟಿ ರಾಧಿಕಾ ಪಂಡಿತ್‌ಗೆ ಹುಟ್ಟು ಹಬ್ಬದ ಸಂಭ್ರಮ.  ಸ್ಯಾಂಡಲ್‌ವುಡ್‌ ಕ್ವೀನ್‌ 38ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮೊದಲ ಸಿನಿಮಾದಲ್ಲಿಯೇ ಅತ್ಯಂತ ಯಶಸ್ಸು ಗಳಿಸಿದ ನಟಿಗೆ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ರು. ಯಶ್‌, ಪುನೀತ್‌ ರಾಜ್‌ಕುಮಾರ್‌, ಶಿವರಾಜ್‌ಕುಮಾರ್‌, ಅಜಯ್‌ ರಾವ್‌ ಮುಂತಾದ ಹೀರೋಗಳೊಟ್ಟಿಗೆ ನಾಯಕಿಯಾಗಿ ಮಿಂಚಿದ್ದಾರೆ ನಟಿ ರಾಧಿಕಾ ಪಂಡಿತ್.‌

ಒಂದೇ ಸಿನಿಮಾದಲ್ಲಿ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ, ನೆಚ್ಚಿನ ಹುಡುಗನೊಂದಿಗೆ ವಿವಾಹದ ಬಳಿಕ ರಾಧಿಕಾ ಪಂಡಿತ್‌ ಸಿನಿಮಾದಿಂದ ಸ್ವಲ್ಪ ದೂರ ಉಳಿದಿದ್ದಾರೆ. ಯಶ್‌ ಜೊತೆ ಮದುವೆ ಆದ ಬಳಿಕ ಆದಿ ಲಕ್ಷ್ಮಿ ಪುರಾಣ ಸಿನಿಮಾದಲ್ಲಿ ನಟಿಸಿ, ಮತ್ತೊಮ್ಮೆ ಸಿನಿ ರಂಗದಿಂದ ದೂರ ಉಳಿದ್ರು. ಇಬ್ಬರ ಮಕ್ಕಳು ಐರಾ ಹಾಗೂ ಯಥರ್ವಾ ಪೋಷಣೆಯಲ್ಲಿ ಕಂಪ್ಲೀಟ್‌ ಬ್ಯುಸಿ ಆಗಿದ್ದಾರೆ ನಮ್ಮ ಕ್ವೀನ್.‌

ರಾಧಿಕಾ ಪಂಡಿತ್‌ ಅವರು ಮತ್ತೆ ಸಿನಿಮಾ ಮಾಡಬೇಕೆಂದು ಅಭಿಮಾನಿಗಳ ಆಸೆಯಾಗಿದ್ದು, ಹುಟ್ಟು ಹಬ್ಬದ ನಿಮಿತ್ತ ಸಾಮಾಜಿಕ ಜಾಲತಾಣದಲ್ಲಿ ನಟಿಗೆ ಭರಪೂರ ಶುಭ ಹಾರೈಸಿದ್ದಾರೆ ಅಭಿಮಾನಿಗಳು..

Share Post